alex Certify ಭಾರತದಲ್ಲಿ ಕೊರೊನಾ ಲಸಿಕೆ ಯಾರ್ಯಾರಿಗೆ ಮೊದಲು ಸಿಗಲಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಕೊರೊನಾ ಲಸಿಕೆ ಯಾರ್ಯಾರಿಗೆ ಮೊದಲು ಸಿಗಲಿದೆ ಗೊತ್ತಾ….?

ಭಾರತದಲ್ಲಿ ಮೊದಲ 1 ಕೋಟಿ ಕೊರೊನಾ ಲಸಿಕೆಯನ್ನ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತೆ. ನಂತರದಲ್ಲಿ 2 ಕೋಟಿ ಲಸಿಕೆಯನ್ನ ಅಗತ್ಯ ಸೇವೆಯಲ್ಲಿ ನಿರತರಾಗಿರುವ ಕಾರ್ಮಿಕರಿಗೆ ನೀಡಲಾಗುತ್ತೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​ ಈ ಪ್ರಸ್ತುತಿಯನ್ನ ನೀಡಿದ್ರು. ವೈದ್ಯರು ಹಾಗೂ ನರ್ಸ್​ಗಳು ಸೇರಿದಂತೆ ಒಟ್ಟು 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಕೊರೊನಾ ಲಸಿಕೆ ನೀಡಲಾಗುವುದು ಎಂದು ಸಚಿವಾಲಯ ತನ್ನ ಪ್ರಸ್ತುತಿಯಲ್ಲಿ ಹೇಳಿದೆ.

ಇದಾದ ಬಳಿಕ ಪೊಲೀಸ್​ ಇಲಾಖೆ,  ಸಶಸ್ತ್ರ ಪಡೆ ಸೇರಿದಂತೆ ಸುಮಾರು 2 ಕೋಟಿ ಮುಂಚೂಣಿ ಕಾರ್ಮಿಕರಿಗೆ ಹಾಗೂ ಪುರಸಭೆ ಕಾರ್ಮಿಕರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...