ದೇಶದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 78.14 ಲಕ್ಷ ಮುಟ್ಟಿದೆ. ಇದೇ ವೇಳೆ ಸಮಾಧಾನ ತರುವ ಸುದ್ದಿಯೊಂದರಲ್ಲಿ, 70.16 ಲಕ್ಷ ಸೋಂಕಿತರು ಚೇತರಿಕೆ ಕಂಡಿದ್ದಾರೆ ಎಂದು ತಿಳಿದುಬಂದಿದೆ.
ಶುಕ್ರವಾರದಂದು 53,470 ಕೋವಿಡ್-19 ಪಾಸಿಟಿವ್ ಕೇಸುಗಳು ದಾಖಲಾಗಿವೆ. ಕೋವಿಡ್-19 ಸೋಂಕಿತರ ಪೈಕಿ ಶೇ.89.78 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ 1,17,956 ಮಂದಿ ಮೃತಪಟ್ಟಿದ್ದಾರೆ.
ಕೋವಿಡ್-19 ಸೋಂಕಿನಿಂದ ಮರಣದ ಸಾಧ್ಯತೆಯು 1.51 ಪ್ರತಿಶತಕ್ಕೆ ಇಳಿದಿರುವುದು ಮತ್ತೊಂದು ನಿಟ್ಟುಸಿರಿನ ವಿಚಾರವಾಗಿದೆ. ಸದ್ಯ 6,80,680 ಸಕ್ರಿಯ ಕೋವಿಡ್-19 ಪ್ರಕರಣಗಳು ದೇಶದಲ್ಲಿ ಇವೆ ಎನ್ನಲಾಗಿದೆ.
ಅಕ್ಟೋಬರ್ 23ರವರೆಗೂ ಒಟ್ಟಾರೆ 10,13,82,564 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದ್ದು, ಶುಕ್ರವಾರ ಒಂದೇ ದಿನ 12,69,479 ಮಾದರಿಗಳ ಪರೀಕ್ಷೆ ನಡೆದಿದೆ ಎಂದು ICMR ತಿಳಿಸಿದೆ.