ಕಳೆದ ವರ್ಷ ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭವಾಗಿದೆ. ಜೂನ್ 28ರಿಂದ ಯಾತ್ರೆ ಆರಂಭವಾಗಲಿದ್ದು, ಒಟ್ಟು 52 ದಿನಗಳ ಕಾಲ ನಡೆದ ಬಳಿಕ ಆಗಸ್ಟ್ 22ರಂದು ಅಂತ್ಯವಾಗಲಿದೆ.
3,880 ಮೀಟರ್ ಎತ್ತರದಲ್ಲಿರುವ ನೈಸರ್ಗಿಕ ಮಂಜಿನ ಶಿವಲಿಂಗವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದು, ಅಮರನಾಥ ಯಾತ್ರೆಗಾಗಿ ಈಗಾಗಲೇ ಬಹುತೇಕರು ನೋಂದಣಿ ಮಾಡಿಕೊಂಡಿದ್ದಾರೆ.
ಗ್ರಾಹಕರೇ ಗಮನಿಸಿ: ನಾಳೆಯಿಂದ ಎರಡು ದಿನಗಳ ಕಾಲ ನಡೆಯಲಿದೆ ಬ್ಯಾಂಕ್ ಮುಷ್ಕರ
ಅಮರನಾಥ ಯಾತ್ರಿಗಳು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದ್ದು, ಸರ್ಕಾರ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸಕಲ ಸಿದ್ಧತೆಯನ್ನು ಕೈಗೊಂಡಿದೆ.