alex Certify ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ

ತಾನು ಅಪಘಾತ ಮಾಡಿ ತನ್ನ ತಪ್ಪನ್ನು ನಾಯಿ ಮೇಲೆ ಹಾಕಿದ್ದಾರೆ ಫ್ಯಾಷನ್‌ ಡಿಸೈನರ್‌ ಒಬ್ಬರು. ಈ ಘಟನೆ ನಡೆದಿರೋದು ದೆಹಲಿಯ ಕೈಲಾಶ್​ ಬಡಾವಣೆಯ ಪೂರ್ವಭಾಗದಲ್ಲಿರುವ ಸಪ್ನಾ ಚಿತ್ರಮಂದಿರದ ಬಳಿ. ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.

ಹರಿಯಾಣದ ಫರೀದಾಬಾದ್​ ನಿವಾಸಿ ರೋಷನಿ ಅರೋರಾ ತಮ್ಮ ಬಿಎಂಡಬ್ಲ್ಯು ಕಾರು ಚಲಾಯಿಸುವಾಗ ಐಸ್ ಕ್ರೀಂ ಅಂಗಡಿಗೆ ಗುದ್ದಿದ್ದಾರೆ. ಈ ವೇಳೆ ಐಸ್ ಕ್ರೀಂ ಅಂಗಡಿ ಬಳಿ ನಿಂತಿದ್ದ ಮುಕೇಶ್​ ಕುಮಾರ್​, ಸಪ್ನಾಕುಮಾರಿ, ಗುಡ್ಡು ಮತ್ತು ಹರ್ಷಿತ್​ ಕೌರ್​ ಸೇರಿ ಒಟ್ಟು ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಇನ್ನು ಘಟನೆ ಸಂಬಂಧ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಯಾಕೆ ಹೀಗಾಯ್ತು ಎಂದು ಕೇಳಿದ್ದಕ್ಕೆ ನನ್ನ ನಾಯಿ ಕಾರಿನೊಳಗೆ ನನ್ನ ಮೇಲೆ ಎಗರಿತು. ಈ ವೇಳೆ ಮಿಸ್ ಆಗಿ ಆ್ಯಕ್ಸಿಲೇಟರ್ ಮೇಲೆ ಕಾಲಿಟ್ಟೆ, ಗಾಡಿ ಮುಂದಕ್ಕೆ ಚಲಾಯಿಸಿತು. ಆಗ ಈ ಘಟನೆ ನಡೆದಿದೆ ಎಂದು ಆಕೆ ಹೇಳಿದ್ದಾಳೆ. ಅಲ್ಲದೆ ಈಕೆ‌ ಕಾರು ಚಲಾಯಿಸುವಾಗ ಮದ್ಯಪಾನ ಮಾಡಿರಲಿಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...