ತಾನು ಅಪಘಾತ ಮಾಡಿ ತನ್ನ ತಪ್ಪನ್ನು ನಾಯಿ ಮೇಲೆ ಹಾಕಿದ್ದಾರೆ ಫ್ಯಾಷನ್ ಡಿಸೈನರ್ ಒಬ್ಬರು. ಈ ಘಟನೆ ನಡೆದಿರೋದು ದೆಹಲಿಯ ಕೈಲಾಶ್ ಬಡಾವಣೆಯ ಪೂರ್ವಭಾಗದಲ್ಲಿರುವ ಸಪ್ನಾ ಚಿತ್ರಮಂದಿರದ ಬಳಿ. ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ.
ಹರಿಯಾಣದ ಫರೀದಾಬಾದ್ ನಿವಾಸಿ ರೋಷನಿ ಅರೋರಾ ತಮ್ಮ ಬಿಎಂಡಬ್ಲ್ಯು ಕಾರು ಚಲಾಯಿಸುವಾಗ ಐಸ್ ಕ್ರೀಂ ಅಂಗಡಿಗೆ ಗುದ್ದಿದ್ದಾರೆ. ಈ ವೇಳೆ ಐಸ್ ಕ್ರೀಂ ಅಂಗಡಿ ಬಳಿ ನಿಂತಿದ್ದ ಮುಕೇಶ್ ಕುಮಾರ್, ಸಪ್ನಾಕುಮಾರಿ, ಗುಡ್ಡು ಮತ್ತು ಹರ್ಷಿತ್ ಕೌರ್ ಸೇರಿ ಒಟ್ಟು ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಇನ್ನು ಘಟನೆ ಸಂಬಂಧ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಯಾಕೆ ಹೀಗಾಯ್ತು ಎಂದು ಕೇಳಿದ್ದಕ್ಕೆ ನನ್ನ ನಾಯಿ ಕಾರಿನೊಳಗೆ ನನ್ನ ಮೇಲೆ ಎಗರಿತು. ಈ ವೇಳೆ ಮಿಸ್ ಆಗಿ ಆ್ಯಕ್ಸಿಲೇಟರ್ ಮೇಲೆ ಕಾಲಿಟ್ಟೆ, ಗಾಡಿ ಮುಂದಕ್ಕೆ ಚಲಾಯಿಸಿತು. ಆಗ ಈ ಘಟನೆ ನಡೆದಿದೆ ಎಂದು ಆಕೆ ಹೇಳಿದ್ದಾಳೆ. ಅಲ್ಲದೆ ಈಕೆ ಕಾರು ಚಲಾಯಿಸುವಾಗ ಮದ್ಯಪಾನ ಮಾಡಿರಲಿಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.