alex Certify ಸಾಮೂಹಿಕ ಅತ್ಯಾಚಾರಕ್ಕೆ ಸ್ಕೆಚ್ ಹಾಕಿದ್ದ ಪಿಯುಸಿ ವಿದ್ಯಾರ್ಥಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮೂಹಿಕ ಅತ್ಯಾಚಾರಕ್ಕೆ ಸ್ಕೆಚ್ ಹಾಕಿದ್ದ ಪಿಯುಸಿ ವಿದ್ಯಾರ್ಥಿಗಳು ಅರೆಸ್ಟ್

ದೆಹಲಿ ಸಾಮೂಹಿಕ ಅತ್ಯಾಚಾರ ಇಡೀ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿತ್ತು. ಆರೋಪಿಗಳಿಗೆ ಗಲ್ಲು ಶಿಕ್ಷೆಯಾದರೂ ದೇಶದಲ್ಲಿ ಇದೊಂದು ಮಾಸದ ಕಪ್ಪು ಚುಕ್ಕೆ. ಆದರೆ ಅತ್ಯಾಚಾರಗಳು ಮಾತ್ರ ಇನ್ನು ನಿಂತಿಲ್ಲ.

ಇದೀಗ ಸಾಮೂಹಿಕ ಅತ್ಯಾಚಾರಕ್ಕೆ ಸ್ಕೆಚ್ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸ್ಕೆಚ್ ಹಾಕುತ್ತಿದ್ದವರ ಮೇಲೆ ದೆಹಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಹೌದು, ಸಾಮಾಜಿಕ ಜಾಲತಾಣ ಎಷ್ಟು ಪರಿಣಾಮಕಾರಿಯೋ ಅಷ್ಟೇ ಇದರಿಂದ ತೊಂದರೆಯೂ ಇದೆ. ಇಂತಹದ್ದೇ ಘಟನೆ ಮತ್ತೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಾಮೂಹಿಕ ಅತ್ಯಾಚಾರವನ್ನು ಪ್ರೇರೇಪಿಸಲು ಗ್ರೂಪ್ ಒಂದನ್ನ ದೆಹಲಿಯ ಪ್ರಸಿದ್ಧ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ತೆರೆದಿದ್ದರು ಎನ್ನಲಾಗಿದೆ.

ಈ ಗ್ರೂಪ್‌ನಲ್ಲಿ ತಮ್ಮ ಜೊತೆ ಓದುತ್ತಿದ್ದ ಹುಡುಗಿಯರ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತಂತೆ. ಹಾಗೂ ಸಾಮೂಹಿಕ ಅತ್ಯಾಚಾರದ ಬಗ್ಗೆಯೂ ಚರ್ಚೆ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಅನೇಕ ಹುಡುಗಿಯರ ಫೋಟೋಗಳನ್ನು ಬಾಯ್ಸ್ ಲಾಕರ್ ರೂಂ ಎಂಬ ಆನ್‌ಲೈನ್ ಗ್ರೂಪ್ ಮೂಲಕ ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಗ್ರೂಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲ ಸದಸ್ಯರನ್ನೂ ಬಂಧಿಸುವಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...