alex Certify ಶವದ ಮುಂದೆ ತಾಯಿ ಅಳ್ತಿರುವಾಗ ನಡೀತು ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶವದ ಮುಂದೆ ತಾಯಿ ಅಳ್ತಿರುವಾಗ ನಡೀತು ಅಚ್ಚರಿ

ಪಾಟ್ನಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಗನ ಶವದ ಮುಂದೆ ಕುಳಿತು ತಾಯಿ ಕಣ್ಣೀರು ಹಾಕ್ತಿದ್ದಳು. ಈ ವೇಳೆ ಮಗ ಉಸಿರಾಡಲು ಶುರು ಮಾಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

17 ವರ್ಷದ ಸೌರಬ್ ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆ ಸೇರಿದ್ದ. ಸರಿಯಾಗಿ ಚಿಕಿತ್ಸೆ ನೀಡದ ಆಸ್ಪತ್ರೆಯವರು ನಕಲಿ ದಾಖಲೆ ನೀಡಿ ಮಗ ಸಾವನ್ನಪ್ಪಿದ್ದಾನೆಂದು ಕುಟುಂಬಸ್ಥರ ಕೈಗೆ ಶವ ನೀಡಿದ್ದಾರೆ.

ಹಳ್ಳಿಗೆ ಶವ ತಂದ ಕುಟುಂಬಸ್ಥರು ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದಾರೆ. ಈ ವೇಳೆ ಮಗ ಉಸಿರಾಡ್ತಿರುವುದು ತಾಯಿಗೆ ಗೊತ್ತಾಗಿದೆ. ತಕ್ಷಣ ಆತನನ್ನು ಪಿಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಹರಿಹಾಯ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...