alex Certify ಲಿವ್ ಇನ್ ನಲ್ಲಿದ್ದವಳು ಪದೇ ಪದೇ ಕೇಳ್ತಿದ್ದಳು ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿವ್ ಇನ್ ನಲ್ಲಿದ್ದವಳು ಪದೇ ಪದೇ ಕೇಳ್ತಿದ್ದಳು ಹಣ

ರಾಜಸ್ಥಾನದ ಜೈಪುರದಲ್ಲಿ ನಡೆದ ಮಹಿಳೆ ಹತ್ಯೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇ 8ರಂದು ಜೈಪುರದಲ್ಲಿ ಮಹಿಳೆ ಶವ ಸಿಕ್ಕಿತ್ತು. ಮೂರು ಪ್ರತ್ಯೇಕ ತಂಡವನ್ನು ರಚಿಸಿದ ಪೊಲೀಸರು ವಿಚಾರಣೆ ನಡೆಸಿದ್ದರು. ಮಹಿಳೆ ಪ್ರೇಮಿ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಪೂಜಾ ಬಾಂಗ್ಲಾ ದೇಶದವಳು. ಕಳೆದ ಎರಡು ವರ್ಷಗಳಿಂದ ಜೈಪುರದಲ್ಲಿ ಆರೋಪಿ ಜೊತೆ ಲಿವ್ ಇನ್ ನಲ್ಲಿದ್ದಳು. ಈ ವೇಳೆ ಪದೇ ಪದೇ ಹಣ ಕೇಳ್ತಿದ್ದಳು. ಈ ಹಣವನ್ನು ಬಾಂಗ್ಲಾದೇಶದ ತನ್ನ ಕುಟುಂಬಸ್ಥರಿಗೆ ಕಳುಹಿಸುತ್ತಿದ್ದಳು. ಪೂಜಾ ಹಣದ ಕಾಟಕ್ಕೆ ಆರೋಪಿ ಕೋಪಗೊಂಡಿದ್ದನಂತೆ.

ಘಟನೆ ನಡೆದ ದಿನವೂ ಪೂಜಾ 50 ಸಾವಿರ ರೂಪಾಯಿ ಕೇಳಿದ್ದಳಂತೆ. ಆರೋಪಿ ಮೊದಲ ಪತ್ನಿ ಹಾಗೂ ಕುಟುಂಬಕ್ಕೆ ಪೂಜಾ ಬಗ್ಗೆ ತಿಳಿಯಲು ಶುರುವಾಗಿತ್ತು ಎನ್ನಲಾಗಿದೆ. ಹಾಗಾಗಿ ಸ್ನೇಹಿತರ ಜೊತೆ ಸೇರಿ ಪೂಜಾ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ. ಆಕೆ ಮಲಗಿದ ಮೇಲೆ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...