alex Certify ಲಾಕ್ ಡೌನ್ ಸಮಯದಲ್ಲಿ ಜನ ಹುಡುಕಿದ್ದಾರೆ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಸಮಯದಲ್ಲಿ ಜನ ಹುಡುಕಿದ್ದಾರೆ ಈ ವಿಷಯ

ಒಂದು ಕಡೆ ಕೊರೊನಾ. ಮತ್ತೊಂದು ಕಡೆ ಲಾಕ್ ಡೌನ್. ಹೀಗೆ ಜನ ಮನೆಯೇ ಮಂತ್ರಾಲಯ ಅಂತ ಕಳೆದ ಒಂದೂವರೆ ತಿಂಗಳಿಂದ ಕಾಲ ಕಳೆಯುತ್ತಿದ್ದಾರೆ. ಮನೆಯಿಂದಲೇ ಕೆಲಸ ಮಾಡುವ ಜನರಿಗೆ ಸದ್ಯದ ಪರಿಸ್ಥಿತಿ ಬೋರ್ ಆಗುತ್ತಿರುವುದಂತೂ ಸತ್ಯ. ಹಾಗಂತ ನಮ್ಮ ಜನ ಇಂಟರ್ ನೆಟ್ ನಿಂದ ಹೊರ ಬಂದಿಲ್ಲ. ಮನೆಯಲ್ಲಿದ್ದು ಅತೀ ಹೆಚ್ಚಾಗಿ ಸರ್ಚ್ ಮಾಡಿದ ವಿಚಾರಗಳನ್ನು ಇದೀಗ ಗೂಗಲ್ ಸಂಸ್ಥೆ ಬಹಿರಂಗಪಡಿಸಿದೆ.

ಹೌದು, ಮನೆಯಲ್ಲಿರುವ ಜನ ಹೆಚ್ಚಾಗಿ ರೇಷನ್ ಅಂಗಡಿ, ಮನೆಯಲ್ಲಿ ಕುಳಿತು ಜಿಮ್ ಮಾಡುವುದು ಹೇಗೆ.?, ಇಮ್ಯುನಿಟಿ ಹೆಚ್ಚಾಗಲು ಏನು ಮಾಡಬೇಕು, ಟೀಚ್ ಆನ್ ಲೈನ್, ಲರ್ನಿಂಗ್, ವರ್ಕ್ ಫ್ರಂ ಹೋಮ್ ಹೀಗೆ ಹಲವಾರು ವಿಚಾರಗಳ ಬಗ್ಗೆ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.

ಇದರಲ್ಲಿ‌ ಮುಖ್ಯವಾಗಿ ವಿಟಮಿನ್ ಸಿ ಹಾಗೂ ಇಮ್ಯುನಿಟಿ ಹೆಚ್ಚು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಹುಡುಕಾಟ ನಡೆಸಿದ್ದಾರೆ. ಒಟ್ನಲ್ಲಿ‌ ಮನೆಯಲ್ಲಿ ಇದ್ದು ಬೋರ್ ಆಗ್ತಾ ಇರುವ ಮಂದಿ ಇಂಟರ್ ನೆಟ್ ಮೊರೆ ಹೋಗಿರೋದಂತೂ ಸತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...