ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುವ ಭಾರತ, ಮುಂದಿನ ವರ್ಷ ಅಧ್ಯಕ್ಷ ಸ್ಥಾನ ಅಲಂಕರಿಸಲಿದೆ ಎಂದು ತಿಳಿದುಬಂದಿದೆ.
ದೇಶಗಳ ಹೆಸರಿನ ಆಂಗ್ಲ ವರ್ಣಮಾಲೆ ಆಧಾರದಲ್ಲಿ ಸದಸ್ಯ ರಾಷ್ಟ್ರಗಳು ಪ್ರತಿ ತಿಂಗಳು ಸರದಿ ಮೇಲೆ ಈ ಸ್ಥಾನ ಅಲಂಕರಿಸುತ್ತಿದ್ದು, 2021 ರ ಆಗಸ್ಟ್ ನಲ್ಲಿ ಭಾರತದ ಸರದಿ ಬರಲಿದೆ ಎನ್ನಲಾಗಿದೆ.
ಒಂದು ತಿಂಗಳು ಕಾಲ ಭಾರತ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಲಿದ್ದು, ಬುಧವಾರದಂದು ನಡೆದ ಮತದಾನದಲ್ಲಿ ಭಾರತ 192 ಮತಗಳ ಪೈಕಿ 184 ಮತಗಳನ್ನು ಪಡೆದು ವಿಶ್ವಸಂಸ್ಥೆ ಭದ್ರತಾ ಮಂಡಳಿ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.