ದೇಶ ಕೊರೊನಾ ಸಂಕಷ್ಟದಲ್ಲಿರುವ ಮಧ್ಯೆ ಬಂದಪ್ಪಳಿಸಿದ ನಿಸರ್ಗ ಚಂಡಮಾರುತ ಸಮುದ್ರ ತೀರ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗೆ ಹಾನಿ ಮಾಡಿದೆ. ಅದರಲ್ಲೂ ಕೊರೊನಾ ವ್ಯಾಪಕವಾಗಿರುವ ಮಹಾರಾಷ್ಟ್ರ ಹಾಗೂ ಗುಜರಾತ್ ನಿಸರ್ಗ ಹೊಡೆತಕ್ಕೆ ತತ್ತರಿಸಿವೆ.
ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಆದರೆ ಮುಂಜಾಗ್ರತಾ ಕ್ರಮ ಕೈಗೊಂಡ ಪರಿಣಾಮ ನೂರಾರು ಮಂದಿಯ ಜೀವ ಹಾನಿಯಾಗುವುದು ತಪ್ಪಿದೆ. ಹೌದು, ನಿಸರ್ಗ ಚಂಡಮಾರುತದ ಮಾಹಿತಿ ಮುಂಚಿತವಾಗಿಯೇ ತಿಳಿದಿದ್ದ ಕಾರಣ ತೀರ ಪ್ರದೇಶದ ಲಕ್ಷಾಂತರ ಮಂದಿಯನ್ನು ಸ್ಥಳಾಂತರ ಮಾಡಿದ್ದು, ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.
ಈಗ ನಿಸರ್ಗ ಚಂಡಮಾರುತ ದಿಕ್ಕು ಬದಲಿಸಿರುವುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಒಂದೊಮ್ಮೆ ಇದು ದಿಕ್ಕು ಬದಲಿಸದೆ ಇದ್ದಲ್ಲಿ ಮುಂಗಾರು ಆರಂಭದಲ್ಲೇ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರುವ ಸಂಭವವಿತ್ತು ಎಂದು ಹೇಳಲಾಗಿದೆ.