alex Certify ಮಾರ್ಚ್ ವರೆಗೆ ಇದನ್ನು ಉಚಿತವಾಗಿ ನೀಡಲಿದೆ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ ವರೆಗೆ ಇದನ್ನು ಉಚಿತವಾಗಿ ನೀಡಲಿದೆ ಸರ್ಕಾರ

ದೇಶದಾದ್ಯಂತ ಕಾಡ್ತಿರುವ ಕೊರೊನಾ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಜನರ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಪ್ರೋತ್ಸಾಹಕ ಪ್ಯಾಕೇಜ್ 3 ಜಾರಿಗೆ ತರುವ ತಯಾರಿಯಲ್ಲಿದೆ. ಸರ್ಕಾರ ಈ ಪ್ಯಾಕೇಜ್‌ನಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆಯ ಪ್ರಯೋಜನಗಳನ್ನು ಮುಂದಿನ ವರ್ಷದ ಮಾರ್ಚ್ ವರೆಗೆ ವಿಸ್ತರಿಸುವ ಸಾಧ್ಯತೆಯಿದೆ.

ಕೊರೊನಾ ವೈರಸ್ ನಿಂದ ದೇಶದ ಬಡ ಜನರನ್ನು ರಕ್ಷಿಸುವ ಸಲುವಾಗಿ ಸರ್ಕಾರ ಮಾರ್ಚ್‌ನಲ್ಲಿ ಪಿಎಂಜಿಕೆವೈ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯನ್ನು ಜೂನ್ ವರೆಗೆ ಜಾರಿಗೆ ತರಲಾಗಿತ್ತು, ಆದರೆ ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು 2020 ರ ನವೆಂಬರ್ ವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿತ್ತು. ಈಗ ಈ ಯೋಜನೆಯ ಲಾಭವನ್ನು ಮಾರ್ಚ್ ವರೆಗೆ ನೀಡಲು ಆಲೋಚಿಸುತ್ತಿದೆ.

ಈ ಯೋಜನೆಯಲ್ಲಿ ಸರ್ಕಾರ ನಗದಿನ ಜೊತೆ ಆಹಾರ ನೀಡುವ ಸಮಯದ ಮಿತಿಯನ್ನು ವಿಸ್ತರಿಸಲಿದೆ. ಪಿಎಂಜಿಕೆವೈ ಅಡಿಯಲ್ಲಿ ಸರ್ಕಾರ ತಿಂಗಳಿಗೆ 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ನೀಡುತ್ತದೆ. ಸರ್ಕಾರದ ಈ ಯೋಜನೆಯ ಲಾಭವು ದೇಶದ ಸುಮಾರು 81 ಕೋಟಿ ಜನರಿಗೆ ಸಿಗ್ತಿದೆ. ಇದಲ್ಲದೆ, 19.4 ಮಿಲಿಯನ್ ಕುಟುಂಬಗಳಿಗೆ ಪ್ರತಿ ತಿಂಗಳು 1 ಕೆಜಿ ಧಾನ್ಯವನ್ನು ಉಚಿತ ನೀಡಲಾಗುತ್ತದೆ. ಈ ಧಾನ್ಯವನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೀಡಲಾಗುತ್ತಿದೆ. ಕೊರೊನಾ ಕಾರಣಕ್ಕೆ ಯಾವುದೇ ಕುಟುಂಬ ಹಸಿವಿನಿಂದ ಬಳಲದಿರಲಿ ಎನ್ನುವ ಕಾರಣಕ್ಕೆ ಸರ್ಕಾರ ಈ ಯೋಜನೆ ವಿಸ್ತರಿಸುವ ನಿರ್ಧಾರ ತೆಗೆದುಕೊಳ್ಳುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...