alex Certify ಕಣ್ಣಂಚನ್ನು ತೇವಗೊಳಿಸುತ್ತೆ ಲಾಕ್‌ ಡೌನ್‌ ಸಂದರ್ಭದ ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಲಾಕ್‌ ಡೌನ್‌ ಸಂದರ್ಭದ ಈ ಫೋಟೋ

ಕೊರೊನಾ ಮಹಾಮಾರಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕೆಲಸ ಅರಸಿ ದೊಡ್ಡ ದೊಡ್ಡ ನಗರಗಳಿಗೆ ಬಂದ ವಲಸೆ ಕಾರ್ಮಿಕರ ಬದುಕಂತೂ ಹೇಳತೀರದಾಗಿದೆ. ಒಂದು ಕಡೆ ಕೊರೊನಾ ಕಾಟವಾದ್ರೆ, ಮತ್ತೊಂದು ಕಡೆ ಕೈಲಿ ಕೆಲಸ ಇಲ್ಲದೆ ಒದ್ದಾಡುತ್ತಿದ್ದಾರೆ.

ಇದೆಲ್ಲದರ ನಡುವೆ ಆಯಾಯ ಸರ್ಕಾರಗಳು ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ.

ಆದರೆ ಕೆಲವೊಂದು ಅಂತರ್ ರಾಜ್ಯಗಳಿಗೆ ಇನ್ನು ಅವಕಾಶ ಇಲ್ಲ. ಹೀಗಾಗಿ ಕಾಲ್ನಡಿಗೆಯಲ್ಲಿ, ಟ್ರಕ್ ಗಳ ಮೂಲಕ ತಮ್ಮ ಮನೆ ಸೇರಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇಂತಹ ಅನೇಕ ಘಟನೆಗಳನ್ನು ನಾವು ಕಣ್ಮುಂದೆ ನೋಡುತ್ತಿದ್ದೇವೆ.

ಇಂತಹದ್ದೇ ಮನ ಕಲುಕುವ ಘಟನೆಯೊಂದು ರಾಯಪುರದಲ್ಲಿ ನಡೆದಿದೆ. ತಮ್ಮ ಮನೆ ಸೇರಲು ಮಹಿಳೆಯರು ಟ್ರಕ್ ಮೊರೆ ಹೋಗಿದ್ದಾರೆ. ಈ ವೇಳೆ ತೆಗೆದ ಒಂದಿಷ್ಟು ಫೋಟೋಗಳು ಮನಕಲುಕುವಂತೆ ಮಾಡಿವೆ.

ವ್ಯಕ್ತಿಯೊಬ್ಬ ಮಗುವನ್ನು ಎತ್ತಿಕೊಂಡಿದ್ದು, ಮಹಿಳೆ ತನ್ನ ಮಗುವನ್ನು ಆ ವ್ಯಕ್ತಿ ಕೈಯಲ್ಲಿ ಕೊಟ್ಟು ಎಲ್ಲಿ ಏನಾಗುತ್ತದೆಯೋ ಎಂಬ ಭಯದಲ್ಲಿ ನಿಂತಿದ್ದಾರೆ. ನಿಜಕ್ಕೂ ಒಂದು ಕ್ಷಣ ಈ ದೃಶ್ಯ ಎಂತವರನ್ನೂ ಭಾವುಕರನ್ನಾಗಿ ಮಾಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...