ಕಳೆದ ಹಲವು ವರ್ಷಗಳಿಂದ ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಕೊರೊನಾ ಲಾಕ್ಡೌನ್ ನಿಂದಾಗಿ ರಿಲಯನ್ಸ್ ಷೇರುಗಳ ಮೌಲ್ಯ ಕುಸಿದಿದ್ದ ಕಾರಣ ಆ ಪಟ್ಟವನ್ನು ಕಳೆದುಕೊಂಡಿದ್ದರು.
ಆ ಬಳಿಕ ನಡೆದ ಬೆಳವಣಿಗೆಯಲ್ಲಿ ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಫೇಸ್ಬುಕ್ ಸೇರಿದಂತೆ ಹಲವು ಸಂಸ್ಥೆಗಳು ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಹೂಡಿಕೆ ಮಾಡಿದ್ದು, ಜೊತೆಗೆ ಲಾಕ್ಡೌನ್ ಸಡಿಲಿಕೆಯಿಂದಾಗಿ ಆರ್ಥಿಕ ಚಟುವಟಿಕೆ ಆರಂಭವಾದ ಕಾರಣ ರಿಲಯನ್ಸ್ ಷೇರುಗಳ ಮೌಲ್ಯವೂ ಏರಿಕೆಯಾಗಿತ್ತು.
ಇದರಿಂದಾಗಿ ಮುಖೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿ ಹೊರಹೊಮ್ಮಿದ್ದು, ಅವರ ಆಸ್ತಿಯ ಮೌಲ್ಯ ಬರೋಬ್ಬರಿ 57.5 ಶತಕೋಟಿ ಡಾಲರ್ ಗಳಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಜಾಕ್ ಮಾ ಅವರ ಆಸ್ತಿ ಮೌಲ್ಯ 47.3 ಶತಕೋಟಿ ಡಾಲರ್ ಗಳಾಗಿದೆ.