alex Certify ಭಿಕ್ಷುಕರ ಸಮೀಕ್ಷೆ ವೇಳೆ ಬಹಿರಂಗವಾಯ್ತು ಆಘಾತಕಾರಿ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಿಕ್ಷುಕರ ಸಮೀಕ್ಷೆ ವೇಳೆ ಬಹಿರಂಗವಾಯ್ತು ಆಘಾತಕಾರಿ ಅಂಶ

ಜೈಪುರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದೆ. ಭಿಕ್ಷುಕರ ಸಮಸ್ಯೆ ಕಡಿಮೆ ಮಾಡಲು ಅಲ್ಲಿನ ಪೊಲೀಸರು ಮುಂದೆ ಬಂದಿದ್ದಾರೆ. ಭಿಕ್ಷುಕರಿಗೆ ಕೆಲಸ ನೀಡಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಸಮೀಕ್ಷೆಯೊಂದು ನಡೆದಿದೆ. ಸಮೀಕ್ಷೆಯಲ್ಲಿ ಆಘಾತಕಾರಿ ವಿಷ್ಯ ಹೊರ ಬಿದ್ದಿದೆ.

ಜೈಪುರದಲ್ಲಿ 1162 ಭಿಕ್ಷುಕರಿರುವುದು ಬಹಿರಂಗವಾಗಿದೆ. ಇವರಲ್ಲಿ ಐದು ಮಂದಿ ಪದವಿ ಮತ್ತು ಸ್ನಾತಕೋತ್ತರ ಪದವೀಧರರು. ಜೈಪುರ, ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಭಿಕ್ಷುಕರು ದೊಡ್ಡ ಸಮಸ್ಯೆಯಾಗಿದ್ದಾರೆ.

ಭಿಕ್ಷುಕರ ಪ್ರೊಫೈಲ್ ಸಿದ್ಧವಾಗಿದೆ. ಅದಕ್ಕೆ ತಕ್ಕಂತೆ ಕೆಲಸ ನೀಡಲು ನಿರ್ಧರಿಸಲಾಗಿದೆ. ಸದ್ಯ ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲಾಗ್ತಿದೆ. ಭಿಕ್ಷುಕರ ಶಿಕ್ಷಣ, ಆರೋಗ್ಯ, ವಯಸ್ಸು, ಲಿಂಗ, ಕೌಶಲ್ಯ ಮುಂತಾದ 26 ಅಂಶಗಳನ್ನು ಪಟ್ಟಿ ಮಾಡಲಾಗಿದೆ.

ಸಮೀಕ್ಷೆ ಪ್ರಕಾರ, 237 ಜನರಿಗೆ ಓದಲು ಮತ್ತು ಬರೆಯಲು ಬರುತ್ತದೆಯಂತೆ. ಈ ಪೈಕಿ ಇಬ್ಬರು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದರೆ, ಮೂವರು ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಇತರ 193 ಮಂದಿಯಲ್ಲಿ ಒಂದನೇ ತರಗತಿಯಿಂದ 12 ರವರೆಗೆ ಶಿಕ್ಷಣ ಪಡೆದವರಿದ್ದಾರೆ.

ಭಿಕ್ಷುಕರಲ್ಲಿ 117 ಜನರು ಯಾವುದೇ ಕೆಲಸ ಮಾಡಲು ಸಿದ್ಧರಾಗಿದ್ದರೆ 160 ಮಂದಿ ಯಾವುದೇ ಕೆಲಸ ಮಾಡಲು ಸಿದ್ಧವಿಲ್ಲ. ಉನ್ನತ ಶಿಕ್ಷಣ ಪಡೆದ ಇಬ್ಬರು ಭಿಕ್ಷುಕರು 50 ರಿಂದ 55 ವರ್ಷ ವಯಸ್ಸಿನವರು. ಇಬ್ಬರು 32 ರಿಂದ 35 ವರ್ಷ ಮತ್ತು ಒಬ್ಬರು 65 ವರ್ಷ ವಯಸ್ಸಿನವರು. ಅವರು ಯಾವುದೇ ರೀತಿಯ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಗುರುತಿಸಲ್ಪಟ್ಟ 27 ಅನಕ್ಷರಸ್ಥ ಭಿಕ್ಷುಕರು ಸಹ ಅಧ್ಯಯನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಗರಿಷ್ಠ 809 ಭಿಕ್ಷುಕರು ರಾಜಸ್ಥಾನದಿಂದ ಬಂದವರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...