ಭಾರತದಲ್ಲಿ ಅನೇಕ ಪ್ರವಾಸಿ ತಾಣವಿದೆ. ವಿದೇಶದಿಂದ ಭಾರತಕ್ಕೆ ಬರುವ ಜನರು ಇಲ್ಲಿ ಮೋಜು, ಮಸ್ತಿ ಮಾಡಿ ವಾಪಸ್ ಹೋಗ್ತಾರೆ. ಆದ್ರೆ ಕೆಲವರು ಇಲ್ಲಿಯೇ ವಾಸ ಶುರು ಮಾಡ್ತಾರೆ. ಹಿಮಾಚಲ ಪ್ರದೇಶದ ಒಂದು ಗ್ರಾಮ ಇದಕ್ಕೆ ಉದಾಹರಣೆ.
ಆರಂಭದಲ್ಲಿ ಇಸ್ರೇಲ್ ನ ಒಂದಿಬ್ಬರು ಬಂದು ಇಲ್ಲಿ ಜಾಗವನ್ನು ಬಾಡಿಗೆಗೆ ಪಡೆದಿದ್ದರು. ನಂತ್ರ ಇಲ್ಲಿ ಕೆಫೆ, ಗೆಸ್ಟ್ ಹೌಸ್ ಶುರು ಮಾಡಿದ್ರು. ಈಗ ಈ ಗ್ರಾಮ ಸಂಪೂರ್ಣ ಇಸ್ರೇಲ್ ಗ್ರಾಮವಾಗಿದೆ. ಇಲ್ಲಿಗೆ ಬರುವ ಇಸ್ರೇಲಿಗಳ ಸಂಖ್ಯೆ ಹೆಚ್ಚಿದೆ. ಅಕ್ಕ-ಪಕ್ಕದ ಗ್ರಾಮದಲ್ಲೂ ಇಸ್ರೇಲ್ ಬಾವುಟವನ್ನು ನೋಡಬಹುದು.
ಅಲ್ಲಿನ ಸ್ಥಿತಿ ನೋಡಿದ್ರೆ ಅದೊಂದು ಇಸ್ರೇಲ್ ಗ್ರಾಮ ಎನ್ನುವಂತಿದೆ. ಅಲ್ಲಿನ ಜನರಿಗೆ ಹೆಚ್ಚಾಗಿ ಇಂಗ್ಲೀಷ್ ಬರುವುದಿಲ್ಲ. ಹಾಗಾಗಿ ಇಸ್ರೇಲ್ ಭಾಷೆ ಹೀಬ್ರೂವನ್ನು ಅವರು ಹೆಚ್ಚಾಗಿ ಬಳಸ್ತಾರೆ. ಈ ಗ್ರಾಮದ ವಿಶೇಷವೆಂದ್ರೆ ಇಲ್ಲಿ ಭಾರತೀಯ ಪುರುಷರಿಗೆ ಪ್ರವೇಶವಿಲ್ಲ. ಹಿಮಾಚಲ ಪ್ರದೇಶದ ಧರ್ಮಕೋಟ್ ಮತ್ತು ಕಸೋಲ್ ಗ್ರಾಮದಲ್ಲಿ ಇಸ್ರೇಲಿಗರ ಸಂಖ್ಯೆ ಅತಿ ಹೆಚ್ಚಿದೆ.