alex Certify ಬ್ರೇಕಿಂಗ್‌ ನ್ಯೂಸ್:‌ ಕೊರೊನಾಗೆ ಕಾಂಗ್ರೆಸ್‌ ಸಂಸದ ವಸಂತ ಕುಮಾರ್ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಿಂಗ್‌ ನ್ಯೂಸ್:‌ ಕೊರೊನಾಗೆ ಕಾಂಗ್ರೆಸ್‌ ಸಂಸದ ವಸಂತ ಕುಮಾರ್ ಬಲಿ

ಕೊರೊನಾ ಮಹಾಮಾರಿ ದೇಶದಲ್ಲಿ ಅಬ್ಬರಿಸುತ್ತಿದ್ದು, ಹಲವು ಜನಪ್ರತಿನಿಧಿಗಳೂ ಈಗಾಗಲೇ ಈ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್‌ ಸಂಸದರೊಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ.

ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ಸಂಸದ‌ 70 ವರ್ಷದ ಹೆಚ್.‌ ವಸಂತ್‌ ಕುಮಾರ್ ಕೊರೊನಾಗೆ ಬಲಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಎರಡು ಬಾರಿ ಶಾಸಕರಾಗಿದ್ದ ವಸಂತ್‌ ಕುಮಾರ್‌ ಇದೇ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಕೊರೊನಾ ಸೋಂಕಿಗೊಳಗಾಗಿದ್ದ ಅವರನ್ನು ಆಗಸ್ಟ್‌ 10 ರಂದು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

— Narendra Modi (@narendramodi) August 28, 2020

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...