alex Certify ಬೆರಗಾಗಿಸುತ್ತೆ 50 ವರ್ಷದ ಈ ಮಹಿಳೆ ಮಾಡಿರುವ ಸಾಹಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ 50 ವರ್ಷದ ಈ ಮಹಿಳೆ ಮಾಡಿರುವ ಸಾಹಸ

ಲಾಕ್ ಡೌನ್ ನಿಂದಾಗಿ ಯಾವುದೇ ವಾಹನ ಸಂಚಾರ ಲಭ್ಯವಿಲ್ಲದ ಸಂದರ್ಭದಲ್ಲಿ ತಮ್ಮ ಐದು ವರ್ಷದ ಮೊಮ್ಮಗನ ಚಿಕಿತ್ಸೆಗಾಗಿ 50 ವರ್ಷದ ಮಹಿಳೆಯೊಬ್ಬರು ಮಾಡಿರುವ ಸಾಹಸ ಬೆರಗಾಗಿಸುವಂತಿದೆ.

ಹೌದು, ಇಂತಹ ಒಂದು ಘಟನೆ ಪಶ್ಚಿಮ ಬಂಗಾಳದ ಝರ್ ಗ್ರಾಮ್ ಜಿಲ್ಲೆಯ ಸುರಿಧಿಹ ಎಂಬ ಗ್ರಾಮದಲ್ಲಿ ನಡೆದಿದ್ದು, ಇಲ್ಲಿನ ನಿವಾಸಿ ಮಾಲತಿ ಎಂಬ ಮಹಿಳೆ ಥಲಸೇಮಿಯಾದಿಂದ ಬಳಲುತ್ತಿದ್ದ ತಮ್ಮ ಮೊಮ್ಮಗನ ಚಿಕಿತ್ಸೆಗಾಗಿ 130 ಕಿ.ಮೀ. ದೂರವನ್ನು ಸೈಕಲ್ ನಲ್ಲಿ ಕ್ರಮಿಸಿದ್ದಾರೆ.

ಮಹಿಳೆಯ ಮೊಮ್ಮಗನಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತ ಮರುಪೂರಣ ಮಾಡಿಸುತ್ತಿದ್ದು, ಲಾಕ್ ಡೌನ್ ಗೂ ಮೊದಲು ಸ್ಥಳೀಯ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಮೂಲಕ ಜಿಲ್ಲಾ ಕೇಂದ್ರಕ್ಕೆ ಮೊಮ್ಮಗನನ್ನು ಕರೆದುಕೊಂಡು ಹೋಗುತ್ತಿದ್ದರು.

ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಅಂಬುಲೆನ್ಸ್ ದುರಸ್ತಿಗೆ ಹೋಗಿದ್ದು, ಇತರೆ ವಾಹನಗಳು ಲಭ್ಯವಾಗಲಿಲ್ಲ. ಆಗ ಧೃತಿಗೆಡದ ಮಾಲತಿ ಸೈಕಲ್ ನಲ್ಲಿ ಮೊಮ್ಮಗನನ್ನು ಕೂರಿಸಿಕೊಂಡು 65 ಕಿ.ಮೀ. ದೂರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಕ್ತ ಮರುಪೂರಣ ಮಾಡಿಸಿದ್ದಾರೆ. ಬಳಿಕ ಮತ್ತೆ 65 ಕಿ.ಮೀ. ಕ್ರಮಿಸಿ ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...