2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಅಧಿಕಾರದ ಚುಕ್ಕಾಣಿ ಉಳಿಸಿಕೊಳ್ಳೋಕೆ ಮಮತಾ ಬ್ಯಾನರ್ಜಿ ಈಗಿನಿಂದಲೇ ಕಸರತ್ತನ್ನ ಆರಂಭಿಸಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ತೃಣಮೂಲ ಕಾಂಗ್ರೆಸ್ ಬಿಜೆಪಿ ವಿರುದ್ಧ ಡಿಜಿಟಲ್ ಕ್ಯಾಂಪೇನ್ ಅಸ್ತ್ರ ಬಳಸೋಕೆ ಮುಂದಾಗಿದೆ.
‘ಮಾರ್ಕ್ ಯುವರ್ಸೆಲ್ಫ್ ಸೇಫ್ ಫ್ರಮ್ ಬಿಜೆಪಿ’ ಎಂಬ ಡಿಜಿಟಲ್ ಕ್ಯಾಂಪೇನ್ ಆರಂಭಿಸಿರುವ ತೃಣಮೂಲ ಕಾಂಗ್ರೆಸ್ ಈ ಮೂಲಕ ಕೇಸರಿ ಪಕ್ಷದ ವಿರುದ್ಧ ಜನರನ್ನ ಒಂದುಗೂಡಿಸೋ ಪ್ರಯತ್ನವನ್ನ ಮಾಡುತ್ತಿದೆ.
Savebengalfrombjp.com ಎಂಬ ವೆಬ್ಸೈಟ್ನ್ನ ಈಗಾಗಲೇ 1 ಲಕ್ಷದ 21 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಹಾಗೂ ಪ್ರತಿ ಗಂಟೆಗೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ಫೇಸ್ಬುಕ್ನಲ್ಲೂ ಈ ಅಭಿಯಾನ ಆರಂಭವಾಗಿದ್ದು 80 ಸಾವಿರ ಫಾಲೋವರ್ಸ್ನ್ನ ಸಂಪಾದಿಸಿದೆ.