ಅತಿ ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಬಂಪರ್ ನೀಡಿದೆ. ಮುದ್ರಾ ಶಿಶು ಸಾಲ ಪಡೆದವರ ಶೇಕಡಾ 2 ರಷ್ಟು ಬಡ್ಡಿಯನ್ನು ಕೇಂದ್ರ ಭರಿಸಲಿದೆ. 3 ತಿಂಗಳ ಬಳಿಕ ಇಎಂಐ ಪಾವತಿಸಿದವರಿಗೆ ಶೇಕಡಾ 2ರಷ್ಟು ಬಡ್ಡಿ ಕಡಿತ ಮಾಡಲಿದೆ. ಇದ್ರಿಂದ 3 ಕೋಟಿ ಜನರಿಗೆ ಸಹಾಯವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬೀದಿ ಬದಿ ವ್ಯಾಪಾರಗಳ ವಿಶೇಷ ಸಾಲ ಸೌಲಭ್ಯಕ್ಕಾಗಿ 5 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ವ್ಯಾಪಾರ ಶುರು ಮಾಡಲ 10 ಸಾವಿರ ರೂಪಾಯಿ ಸಾಲ ಸಿಗಲಿದೆ. ಡಿಜಿಟಲ್ ಪೇಮೆಂಟ್ ಬಳಸಿದ್ರೆ ಸರ್ಕಾರ ವಿಶೇಷ ರಿಯಾಯಿತಿ ನೀಡಲಿದೆ. ಇದ್ರಿಂದ 50 ಲಕ್ಷ ವ್ಯಾಪಾರಿಗಳಿಗೆ ನೆರವಾಗಲಿದೆ.
ಗೃಹ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲು ಮಧ್ಯಮ ವರ್ಗದವರಿಗೆ ಗೃಹ ಸಾಲ ಸಬ್ಸಿಡಿ ಸ್ಕೀಂ ವಿಸ್ತರಿಸಲಾಗಿದೆ. ಗೃಹ ಸಾಲಕ್ಕೆ 70 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. 6 – 18 ಲಕ್ಷ ವಾರ್ಷಿಕ ಆದಾಯ ಪಡೆಯುವವರು ಇದ್ರಡಿ ಬರಲಿದ್ದಾರೆ. 2020ಕ್ಕೆ ಮುಗಿಯಬೇಕಿದ್ದ ಯೋಜನೆಯನ್ನು ಮಾರ್ಚ್ 2021ಕ್ಕೆ ವಿಸ್ತರಿಸಲಾಗಿದೆ. 2.5 ಲಕ್ಷ ಕುಟುಂಬಕ್ಕೆ ಇದ್ರಿಂದ ನೆರವಾಗಲಿದೆ.