ಸಾಮಾಜಿಕ ಜಾಲತಾಣ ವಾಟ್ಸಾಪ್ ಭಾರತದಲ್ಲಿ ಅಪಾರ ಸಂಖ್ಯೆಯ ಬಳಕೆದಾರರನ್ನು ಹೊಂದಿದೆ. ಆದರೆ ಕೆಲದಿನಗಳ ಹಿಂದೆ ಬಹಿರಂಗವಾದ ಸುದ್ದಿಯೊಂದು ವಾಟ್ಸಾಪ್ ಬಳಕೆದಾರರಲ್ಲಿ ಕಳವಳ ಮೂಡಿಸಿತ್ತು.
ಸುಮಾರು 3 ಲಕ್ಷ ಬಳಕೆದಾರರ ದೂರವಾಣಿ ಸಂಖ್ಯೆಗಳು ಗೂಗಲ್ ಸರ್ಚ್ ನಲ್ಲಿ ಪತ್ತೆಯಾಗಿದ್ದು, ಹೀಗಾಗಿ ಖಾಸಗಿ ಮಾಹಿತಿ ಸೋರಿಕೆಯಾಗುವ ಭೀತಿಯನ್ನು ಬಳಕೆದಾರರು ವ್ಯಕ್ತಪಡಿಸಿದ್ದರು.
ಆದರೆ ಈ ಕುರಿತು ವಾಟ್ಸಾಪ್ ಸ್ಪಷ್ಟನೆ ನೀಡಿದ್ದು, ‘ಕ್ಲಿಕ್ ಟು ಚಾಟ್’ ಆಪ್ಶನ್ ಆಯ್ಕೆ ಮಾಡಿದವರ ಫೋನ್ ನಂಬರ್ ಗಳು ಮಾತ್ರ ಗೂಗಲ್ ಸರ್ಚ್ ನಲ್ಲಿ ಕಂಡುಬಂದಿದೆ. ಇದೀಗ ಆ ಲೋಪವನ್ನು ಪರಿಹರಿಸಲಾಗಿದೆ ಎಂದು ಹೇಳುವ ಮೂಲಕ ಬಳಕೆದಾರರ ಆತಂಕವನ್ನು ದೂರ ಮಾಡಿದೆ.