alex Certify ಫೇಸ್ಬುಕ್ ಬಳಕೆದಾರರಿಗೆ ಬಿಗ್ ಶಾಕ್….! 60 ಲಕ್ಷಕ್ಕೂ ಅಧಿಕ ಭಾರತೀಯರ ‘ಡೇಟಾ’ ಲೀಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್ಬುಕ್ ಬಳಕೆದಾರರಿಗೆ ಬಿಗ್ ಶಾಕ್….! 60 ಲಕ್ಷಕ್ಕೂ ಅಧಿಕ ಭಾರತೀಯರ ‘ಡೇಟಾ’ ಲೀಕ್

ಫೇಸ್ಬುಕ್ ಬಳಕೆದಾರರಿಗೆ ಶಾಕಿಂಗ್ ಸಂಗತಿಯೊಂದು ಇಲ್ಲಿದೆ. ವಿಶ್ವದಾದ್ಯಂತ 53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎನ್ನಲಾಗಿದ್ದು, ಈ ಪೈಕಿ 60 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ಬಳಕೆದಾರರಿದ್ದಾರೆ ಎಂದು ಹೇಳಲಾಗಿದೆ.

ಸೈಬರ್ ಭದ್ರತೆಗೆ ಸಂಬಂಧಿಸಿದ ಹಡ್ಸನ್ ರಾಕ್ ಕಂಪನಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ವಿಶ್ವದ 106 ದೇಶಗಳಲ್ಲಿನ ಫೇಸ್ಬುಕ್ ಬಳಕೆದಾರರ ಖಾಸಗಿ ಮಾಹಿತಿಗಳಾದ ಜನ್ಮದಿನಾಂಕ, ಇಮೇಲ್, ಮೊಬೈಲ್ ಸಂಖ್ಯೆ ಮೊದಲಾದವು ಆನ್ಲೈನ್ ನಲ್ಲಿ ಲಭ್ಯವಿದೆ ಎಂದು ತಿಳಿಸಿದೆ.

 ಗಿಫ್ಟ್ ವೋಚರ್, ಕಾರ್ಡ್ ಗಳಿಗೂ GST ಅನ್ವಯ

ಈ ವೈಯಕ್ತಿಕ ಮಾಹಿತಿಗಳು ಸೈಬರ್ ಪಾತಕಿಗಳ ಪಾಲಾದರೆ ತೊಂದರೆ ಎದುರಾಗಬಹುದು ಎನ್ನಲಾಗಿದ್ದು, ಹೀಗಾಗಿ ಬಳಕೆದಾರರು ಕನಿಷ್ಠ ಪಕ್ಷ ಮೂರು ತಿಂಗಳಿಗೊಮ್ಮೆಯಾದರೂ ಪಾಸ್ವರ್ಡ್ ಬದಲಿಸಬೇಕು. ನೆನಪಿರಲಿ ಎಂಬ ಕಾರಣಕ್ಕೆ ಸುಲಭವಾದ ಪಾಸ್ವರ್ಡ್ಗಳನ್ನು ನೀಡುವ ಬದಲು ಸಂಕೀರ್ಣವಾದ ಪಾಸ್ವರ್ಡ್ ನೀಡಬೇಕು ಎಂದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...