ಫೇಸ್ಬುಕ್ ಬಳಕೆದಾರರಿಗೆ ಶಾಕಿಂಗ್ ಸಂಗತಿಯೊಂದು ಇಲ್ಲಿದೆ. ವಿಶ್ವದಾದ್ಯಂತ 53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎನ್ನಲಾಗಿದ್ದು, ಈ ಪೈಕಿ 60 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ಬಳಕೆದಾರರಿದ್ದಾರೆ ಎಂದು ಹೇಳಲಾಗಿದೆ.
ಸೈಬರ್ ಭದ್ರತೆಗೆ ಸಂಬಂಧಿಸಿದ ಹಡ್ಸನ್ ರಾಕ್ ಕಂಪನಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ವಿಶ್ವದ 106 ದೇಶಗಳಲ್ಲಿನ ಫೇಸ್ಬುಕ್ ಬಳಕೆದಾರರ ಖಾಸಗಿ ಮಾಹಿತಿಗಳಾದ ಜನ್ಮದಿನಾಂಕ, ಇಮೇಲ್, ಮೊಬೈಲ್ ಸಂಖ್ಯೆ ಮೊದಲಾದವು ಆನ್ಲೈನ್ ನಲ್ಲಿ ಲಭ್ಯವಿದೆ ಎಂದು ತಿಳಿಸಿದೆ.
ಗಿಫ್ಟ್ ವೋಚರ್, ಕಾರ್ಡ್ ಗಳಿಗೂ GST ಅನ್ವಯ
ಈ ವೈಯಕ್ತಿಕ ಮಾಹಿತಿಗಳು ಸೈಬರ್ ಪಾತಕಿಗಳ ಪಾಲಾದರೆ ತೊಂದರೆ ಎದುರಾಗಬಹುದು ಎನ್ನಲಾಗಿದ್ದು, ಹೀಗಾಗಿ ಬಳಕೆದಾರರು ಕನಿಷ್ಠ ಪಕ್ಷ ಮೂರು ತಿಂಗಳಿಗೊಮ್ಮೆಯಾದರೂ ಪಾಸ್ವರ್ಡ್ ಬದಲಿಸಬೇಕು. ನೆನಪಿರಲಿ ಎಂಬ ಕಾರಣಕ್ಕೆ ಸುಲಭವಾದ ಪಾಸ್ವರ್ಡ್ಗಳನ್ನು ನೀಡುವ ಬದಲು ಸಂಕೀರ್ಣವಾದ ಪಾಸ್ವರ್ಡ್ ನೀಡಬೇಕು ಎಂದು ತಿಳಿಸಲಾಗಿದೆ.