ಕೊರೊನಾ, ಕೊರೊನಾ, ಕೊರೊನಾ….ಈ ವೈರಸ್ ಯಾವಾಗ ದೇಶವನ್ನು ಪ್ರವೇಶ ಮಾಡಿತ್ತೋ ಅಂದಿನಿಂದಲೂ ಯಾರಿಗೂ ನೆಮ್ಮದಿ ಇಲ್ಲದಂಗೆ ಆಗಿದೆ. ಮನೆಯಿಂದ ಹೊರ ಹೋಗೋವುದಕ್ಕೂ ನೂರು ಬಾರಿ ಯೋಚನೆ ಮಾಡಬೇಕಾಗಿದೆ. ಇದು ಒಂದು ಕಡೆಯಾದ್ರೆ, ಮತ್ತೊಂದು ಸರ್ಕಾರದಿಂದ ನೌಕರರಿಗೆ ಸಿಗುವ ಸೌಲಭ್ಯಗಳನ್ನೂ ಈ ಕೊರೊನಾ ಕಿತ್ತುಕೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಈ ಕೊರೊನಾ ಮಧ್ಯೆಯೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಹೌದು, ಲೀವ್ ಟ್ರಾವೆಲ್ ಕನ್ಷೆಷನ್ ಯೋಜನೆ ಇನ್ಮುಂದೆ 2022ರ ಸೆಪ್ಟೆಂಬರ್ ವರೆಗೆ ಇರಲಿದೆ. ಈ ಯೋಜನೆಯನ್ನು ವಿಸ್ತರಿಸುವ ಮೂಲಕ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಖುಷಿ ವಿಚಾರ ನೀಡಿದೆ.
ಈ ಯೋಜನೆ ಅನ್ವಯ, ಜಮ್ಮು ಕಾಶ್ಮೀರ್, ಅಂಡಮಾನ್ ಮತ್ತು ನಿಕೋಬರ್, ಲಡಾಕ್ ಸೇರಿದಂತೆ ಈಶಾನ್ಯ ಭಾಗದ ರಾಜ್ಯಗಳಿಗೆ ಸರ್ಕಾರಿ ವಿಮಾನ ಅಷ್ಟೇ ಅಲ್ಲದೆ ಖಾಸಗಿ ವಿಮಾನಗಳಲ್ಲೂ ಹೋಗಬಹುದು ಎಂದು ಇಲಾಖೆ ತಿಳಿಸಿದೆ.