ಕೇಂದ್ರ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಎರಡು ಯೋಜನೆಗಳಿಗೆ ಕ್ರಮವಾಗಿ 21.87 ಕೋಟಿ ಹಾಗೂ 9.70 ಕೋಟಿ ಜನ ಸೇರ್ಪಡೆಗೊಂಡಿದ್ದಾರೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವಾರ್ಷಿಕ ಪ್ರೀಮಿಯಂ ಕೇವಲ 330 ರೂಪಾಯಿಗಳಾಗಿದ್ದು, ಎರಡು ಲಕ್ಷ ರೂಪಾಯಿ ಮೊತ್ತದ ಜೀವವಿಮೆ ದೊರೆಯಲಿದೆ. 18 ರಿಂದ 50 ವರ್ಷ ವಯಸ್ಸಿನ ವ್ಯಕ್ತಿಗಳು ಇದರ ಚಂದಾದಾರರಾಗಬಹುದಾಗಿದ್ದು, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯಿಂದ ಪ್ರೀಮಿಯಂ ಆಟೋ ಡೆಬಿಟ್ ಆಗುತ್ತದೆ.
ಶಾಲಾ ವಾರ್ಷಿಕ ಅವಧಿ ಸರಿದೂಗಿಸಲು ಬೇಸಿಗೆ ‘ರಜೆ’ ಕಡಿತ
ಇನ್ನು ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ವಾರ್ಷಿಕ ಪ್ರೀಮಿಯಂ ಕೇವಲ 12 ರೂಪಾಯಿಗಳಾಗಿದ್ದು, 2 ಲಕ್ಷ ರೂಪಾಯಿಗಳವರೆಗೆ ದುರ್ಘಟನಾ ವಿಮೆ ಪರಿಹಾರ ಸಿಗಲಿದೆ. 18 ರಿಂದ 70 ವರ್ಷ ವಯಸ್ಸಿನ ವ್ಯಕ್ತಿಗಳು ಇದರ ಚಂದಾದಾರರಾಗಬಹುದಾಗಿದ್ದು,ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಯಿಂದ ಪ್ರೀಮಿಯಂ ಆಟೋ ಡೆಬಿಟ್ ಆಗುತ್ತದೆ. ಈ ಎರಡು ವಿಮೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಸಮೀಪದ ಬ್ಯಾಂಕ್ ಶಾಖೆ, ವಿಮಾ ಕಚೇರಿ ಅಥವಾ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.