alex Certify ಪುಟ್ಟ ಬಾಲಕನ ಕಂಪ್ಲೇಂಟ್‌ ಕೇಳಿ ದಂಗಾದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ಕಂಪ್ಲೇಂಟ್‌ ಕೇಳಿ ದಂಗಾದ ಪೊಲೀಸ್

ಇಡೀ ದೇಶ ಲಾಕ್ ಡೌನ್ ಆಗಿದೆ. ಶಾಲಾ – ಕಾಲೇಜುಗಳು ಮುಚ್ಚಿವೆ. ಒಂದಿಷ್ಟು ಅಂಗಡಿಗಳು, ತುರ್ತು ಸೇವೆಗಳಿಗೆ ಬಿಟ್ಟರೆ ಇನ್ನೆಲ್ಲಾ ಸೇವೆಗಳು ಕ್ಲೋಸ್ ಆಗಿವೆ. ಹೀಗಿರುವಾಗ ಮಕ್ಕಳಿಗೆ ಟ್ಯೂಷನ್ ಮಾಡುವುದು ಎಷ್ಟು ಸರಿ. ಇದನ್ನೇ ಪ್ರಶ್ನೆ ಮಾಡಿರುವ ಬಾಲಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಈ ಘಟನೆ ನಡೆದಿರುವುದು ಪಂಜಾಬ್ ನಲ್ಲಿ. ಪಂಜಾಬ್ ನ ಹುಡುಗನೊಬ್ಬ ಟ್ಯೂಷನ್ ನಿಂದ ತಪ್ಪಿಸಿಕೊಳ್ಳಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಲಾಕ್ ಡೌನ್ ಇದ್ದರೂ ನಮ್ಮ ಟೀಚರ್ ಟ್ಯೂಷನ್ ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ನೀವು ಬುದ್ದಿ ಹೇಳಿ ಅಂತಾ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ನೀಡಿದ್ದಾನೆ. ಕಂಪ್ಲೇಂಟ್ ಸ್ವೀಕರಿಸಿದ ಪೊಲೀಸರು ಬಾಲಕನ ದೂರಿಗೆ ನಕ್ಕಿದ್ದಾರೆ.

ಹಾಗೆಯೇ ಟ್ಯೂಷನ್ ಮಾಡುತ್ತಿದ್ದ ಟೀಚರ್ ಮನೆ ಬಳಿ ಹೋಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಟ್ಯೂಷನ್ ನಿಂದ ಬಚಾವಾಗಲು ಬಾಲಕನ ಈ ಐಡಿಯಾಗೆ ಜನ ಸೈ ಎನ್ನುತ್ತಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...