alex Certify ಪಿಪಿಇ ಕಿಟ್​ ಧರಿಸಿದ ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ಗರ್ಭಾ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಇ ಕಿಟ್​ ಧರಿಸಿದ ವಿದ್ಯಾರ್ಥಿಗಳಿಂದ ಸಾಂಪ್ರದಾಯಿಕ ಗರ್ಭಾ ನೃತ್ಯ

ಗುಜರಾತ್​ನ ಫ್ಯಾಶನ್​ ಡಿಸೈನಿಂಗ್​ ವಿಭಾಗದ ವಿದ್ಯಾರ್ಥಿಗಳು ಪಿಪಿಇ ಕಿಟ್​ ಬಳಸಿ ತಯಾರಿಸಿದ ವಸ್ತ್ರ ಧರಿಸಿ ಸಾಂಪ್ರದಾಯಿಕ ಗರ್ಭಾ ನೃತ್ಯ ಪ್ರದರ್ಶಿಸಿದ್ದಾರೆ.

ಗುಜರಾತ್​ನಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗರ್ಬಾ ನೃತ್ಯವನ್ನ ಮಾಡಲಾಗುತ್ತೆ. ಆದರೆ ಈ ಬಾರಿ ಕರೊನಾ ವೈರಸ್​ ಹಬ್ಬದ ಸಂಭ್ರಮವನ್ನ ನುಂಗಿ ಹಾಕಿದೆ. ಹೀಗಾಗಿ ಸೂರತ್​ನಲ್ಲಿ ಐಡಿಟಿ ವಿದ್ಯಾರ್ಥಿಗಳು ಪಿಪಿಇ ಕಿಟ್​​ನಿಂದ ತಾವೇ ವಿನ್ಯಾಸಗೊಳಿಸಿದ ಡ್ರೆಸ್​ಗಳನ್ನ ಧರಿಸಿ ಗರ್ಭಾ ಡ್ಯಾನ್ಸ್ ಮಾಡಿದ್ದಾರೆ.

ಆರುಷಿ ಉಪ್ರೇತಿ ಮಾರ್ಗದರ್ಶನದಲ್ಲಿ ಐಡಿಟಿಯ ಪ್ರಥಮ ವರ್ಷದ ವಿದ್ಯಾರ್ಥಿಗಳು ಈ ವಸ್ತ್ರವನ್ನ ವಿನ್ಯಾಸಗೊಳಿಸಿದ್ದಾರೆ. ಪಿಪಿಇ ಕಿಟ್​ನಿಂದ ತಯಾರಾದ ಈ ಡ್ರೆಸ್​ಗಳಿಗೆ ಕನ್ನಡಿಯ ಚೂರುಗಳನ್ನ ಬಳಸಿ ಡಿಸೈನ್​ ಮಾಡಲಾಗಿದೆ. ಗರ್ಭಾ ನೃತ್ಯ ಪ್ರದರ್ಶನದ ವೇಳೆ ವಿದ್ಯಾರ್ಥಿಗಳು ಮಾಸ್ಕ್​ ಹಾಕಿದ್ದು ಮಾತ್ರವಲ್ಲದೇ ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...