alex Certify ಪಂಜಾಬಿಯಿಂದ ಇಂಗ್ಲೀಷ್‌ ಗೆ ಅನುವಾದವಾಗ್ತಿದೆ ಸೆಲೆಬ್ರಿಟಿಗಳ ಜಗಳ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿಯಿಂದ ಇಂಗ್ಲೀಷ್‌ ಗೆ ಅನುವಾದವಾಗ್ತಿದೆ ಸೆಲೆಬ್ರಿಟಿಗಳ ಜಗಳ…!

ಸದಾ ಒಂದಿಲ್ಲೊಂದು ಪೋಸ್ಟ್​​ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ಮತ್ತೊಮ್ಮೆ ಟ್ರೆಂಡಿಂಗ್​ನಲ್ಲಿ ಇದ್ದಾರೆ.

ಆದರೆ ಈ ಬಾರಿ ತಾವು ಮಾಡಿದ ಯಡವಟ್ಟು ಟ್ವೀಟ್​ನಿಂದಾಗಿ ಕಂಗನಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟದ ವಿಚಾರದಲ್ಲಿ ಗಾಯಕ ದಲ್​ಜೀತ್​ ಡೋಸಾಂಝ್​​ ಹಾಗೂ ಕಂಗನಾ ನಡುವಿನ ವಾರ್​ ನಿಮಗೆಲ್ಲ ತಿಳಿದೇ ಇರಬಹುದು.

ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿದ್ದ ವೃದ್ಧ ರೈತ ಮಹಿಳೆಯನ್ನ ಶಹೀನ್​ ಬಾಗ್​ನಲ್ಲಿ ರ್ಯಾಲಿಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತೆ ಬಿಲ್ಕೀಸ್​ ಬಾನು ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದ ಕಂಗನಾ ಈಕೆ ಕೇವಲ 100 ರೂಪಾಯಿ ಆಸೆಗೆ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಿರಬಹುದು ಅಂತಾ ಟ್ವೀಟ್​ ಮಾಡಿದ್ದರು.

ಈ ಟ್ವೀಟ್​ ನೋಡಿದ ಗಾಯಕ ದಲ್​ಜಿತ್​ ಕೆಂಡಾಮಂಡಲರಾಗಿದ್ದಾರೆ. ಯಾರಾದ್ರೂ ಕಣ್ಣಿದ್ದೂ ಈ ಮಟ್ಟಕ್ಕೆ ಕುರುಡರಾಗೋಕೆ ಹೇಗೆ ಸಾಧ್ಯ..? ಕಂಗನಾ ಏನೇನೋ ಮಾತನಾಡ್ತಾರೆ ಅಂತಾ ಟ್ವೀಟ್​ ಮಾಡಿದ್ದರು.

ಇದಾದ ಬಳಿಕ ಕಂಗನಾ ತಮ್ಮ ಪೋಸ್ಟ್​ನ್ನ ಡಿಲೀಟ್​ ಕೂಡ ಮಾಡಿದ್ದರು. ಆದರೆ ಈ ಯುದ್ಧ ಇಲ್ಲಿಗೇ ನಿಂತಿಲ್ಲ. ಇಬ್ಬರೂ ಪಂಜಾಬಿ ಭಾಷೆಯಲ್ಲೇ ಟ್ವೀಟರ್​ನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಪಂಜಾಬಿ ಭಾಷೆಯನ್ನ ಅರ್ಥ ಮಾಡಿಕೊಳ್ಳಲಾಗದೇ ಪಂಜಾಬೇತರ ಟ್ವೀಟಿಗರು ಗೊಂದಲಕ್ಕೆ ಸಿಲುಕಿದ್ದಾರೆ.

ಪಂಜಾಬೇತರ ಟ್ವೀಟಿಗರು ಗೊಂದಲಕ್ಕೆ ತೆರೆ ಎಳೆದ ಪಂಜಾಬಿ ಟ್ವೀಟಿಗರು……ದಲಿಜಿತ್​ರ ಪ್ರತಿಯೊಂದು ಟ್ವೀಟ್​ನ್ನೂ ಇಂಗ್ಲಿಷ್​ಗೆ ಅನುವಾದ ಮಾಡಿಕೊಟ್ಟಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...