
ಆದರೆ ಈ ಬಾರಿ ತಾವು ಮಾಡಿದ ಯಡವಟ್ಟು ಟ್ವೀಟ್ನಿಂದಾಗಿ ಕಂಗನಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟದ ವಿಚಾರದಲ್ಲಿ ಗಾಯಕ ದಲ್ಜೀತ್ ಡೋಸಾಂಝ್ ಹಾಗೂ ಕಂಗನಾ ನಡುವಿನ ವಾರ್ ನಿಮಗೆಲ್ಲ ತಿಳಿದೇ ಇರಬಹುದು.
ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿದ್ದ ವೃದ್ಧ ರೈತ ಮಹಿಳೆಯನ್ನ ಶಹೀನ್ ಬಾಗ್ನಲ್ಲಿ ರ್ಯಾಲಿಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತೆ ಬಿಲ್ಕೀಸ್ ಬಾನು ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದ ಕಂಗನಾ ಈಕೆ ಕೇವಲ 100 ರೂಪಾಯಿ ಆಸೆಗೆ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಿರಬಹುದು ಅಂತಾ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ನೋಡಿದ ಗಾಯಕ ದಲ್ಜಿತ್ ಕೆಂಡಾಮಂಡಲರಾಗಿದ್ದಾರೆ. ಯಾರಾದ್ರೂ ಕಣ್ಣಿದ್ದೂ ಈ ಮಟ್ಟಕ್ಕೆ ಕುರುಡರಾಗೋಕೆ ಹೇಗೆ ಸಾಧ್ಯ..? ಕಂಗನಾ ಏನೇನೋ ಮಾತನಾಡ್ತಾರೆ ಅಂತಾ ಟ್ವೀಟ್ ಮಾಡಿದ್ದರು.
ಇದಾದ ಬಳಿಕ ಕಂಗನಾ ತಮ್ಮ ಪೋಸ್ಟ್ನ್ನ ಡಿಲೀಟ್ ಕೂಡ ಮಾಡಿದ್ದರು. ಆದರೆ ಈ ಯುದ್ಧ ಇಲ್ಲಿಗೇ ನಿಂತಿಲ್ಲ. ಇಬ್ಬರೂ ಪಂಜಾಬಿ ಭಾಷೆಯಲ್ಲೇ ಟ್ವೀಟರ್ನಲ್ಲಿ ಜಗಳ ಮಾಡಿಕೊಂಡಿದ್ದಾರೆ. ಪಂಜಾಬಿ ಭಾಷೆಯನ್ನ ಅರ್ಥ ಮಾಡಿಕೊಳ್ಳಲಾಗದೇ ಪಂಜಾಬೇತರ ಟ್ವೀಟಿಗರು ಗೊಂದಲಕ್ಕೆ ಸಿಲುಕಿದ್ದಾರೆ.
ಪಂಜಾಬೇತರ ಟ್ವೀಟಿಗರು ಗೊಂದಲಕ್ಕೆ ತೆರೆ ಎಳೆದ ಪಂಜಾಬಿ ಟ್ವೀಟಿಗರು……ದಲಿಜಿತ್ರ ಪ್ರತಿಯೊಂದು ಟ್ವೀಟ್ನ್ನೂ ಇಂಗ್ಲಿಷ್ಗೆ ಅನುವಾದ ಮಾಡಿಕೊಟ್ಟಿದ್ದಾರೆ.