alex Certify ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಪಾಪಿ

ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ನೌಗಾಂವ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಯುವಕ ನಾಲ್ಕು ವರ್ಷದ ಮುಗ್ಧ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ನಂತರ ಅವಳನ್ನು ಹತ್ಯೆ ಮಾಡಿದ್ದಾನೆ.

ಜೂನ್ 28 ರ ಮಧ್ಯರಾತ್ರಿ ಈ ಘಟನೆ ನೌಗಾವಾ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ. ಜೂನ್ 29 ರ ಬೆಳಿಗ್ಗೆ ಬಾವಿಯಲ್ಲಿ ನಾಲ್ಕು ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಮರಣೋತ್ತರ ವರದಿಯ ಆಧಾರದ ಮೇಲೆ ಪೊಲೀಸರು ಅಪರಿಚಿತ ಆರೋಪಿ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಹುಡುಕಿಕೊಟ್ಟವರಿಗೆ 10,000 ರೂಪಾಯಿಗಳ ಬಹುಮಾನವನ್ನು ನೀಡುವುದಾಗಿ ಪೊಲೀಸರು ಹೇಳಿದ್ದಾರೆ. ಅಜ್ಜನ ಜೊತೆ ಬಾಲಕಿ ರಾತ್ರಿ ಅಂಗಳದಲ್ಲಿ ಮಲಗಿದ್ದಳು ಎನ್ನಲಾಗಿದೆ. ನಾಲ್ಕು ಗಂಟೆ ಸುಮಾರಿಗೆ ಮಳೆ ಬೀಳಲು ಶುರುವಾದಾಗ ಎಚ್ಚರಗೊಂಡ ಅಜ್ಜನ ಬಳಿ ಬಾಲಕಿಯಿರಲಿಲ್ಲ. ನಂತ್ರ ಹುಡುಕಾಟ ಶುರು ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...