alex Certify ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ ಈ ಕೃತ್ಯ: ಐವರು ದುಷ್ಕರ್ಮಿಗಳಿಂದ ಬಾಲಕಿ ಬೆತ್ತಲೆಗೊಳಿಸಿ ಚಿತ್ರಹಿಂಸೆ – ಪೊಲೀಸರಿಂದ ಆರೋಪಿಗಳ ಫೋಟೋ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ ಈ ಕೃತ್ಯ: ಐವರು ದುಷ್ಕರ್ಮಿಗಳಿಂದ ಬಾಲಕಿ ಬೆತ್ತಲೆಗೊಳಿಸಿ ಚಿತ್ರಹಿಂಸೆ – ಪೊಲೀಸರಿಂದ ಆರೋಪಿಗಳ ಫೋಟೋ ರಿಲೀಸ್

ಬಾಲಕಿಯನ್ನ ಐವರು ದುಷ್ಕರ್ಮಿಗಳು ಕ್ರೂರವಾಗಿ ಹಿಂಸಿಸಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದು ಆಸ್ಸಾಂನಲ್ಲಿ ನಡೆದ ಘಟನೆಯಾಗಿದೆ. ವಿಡಿಯೋದಲ್ಲಿ ಐವರು ಬಾಲಕಿಗೆ ಥಳಿಸಿ ಚಿತ್ರಹಿಂಸೆ ನೀಡಿದ್ದಾರೆ.

ಈ ಘಟನೆ ಎಲ್ಲಿ ಹಾಗೂ ಯಾವಾಗ ನಡೆಯಿತು ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಆದರೆ ವಿಡಿಯೋದಲ್ಲಿನ ಕೆಲ ಫೋಟೋಗಳನ್ನ ಆಸ್ಸಾಂ ಪೊಲೀಸರು ರಿಲೀಸ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಆರೋಪಿಗಳ ಫೋಟೋ ಶೇರ್​ ಮಾಡಿರುವ ಪೊಲೀಸರು ಸಾರ್ವಜನಿಕರ ಬಳಿ ಆರೋಪಿಗಳ ಪತ್ತೆಗೆ ಸಹಾಯ ಕೇಳಿದ್ದಾರೆ. ಆರೋಪಿಗಳನ್ನ ಪತ್ತೆ ಮಾಡುವಲ್ಲಿ ನೆರವಾಗುವವರಿಗೆ ಸೂಕ್ತ ಬಹುಮಾನವನ್ನೂ ನೀಡಲಾಗುವುದು ಎಂದು ಆಸ್ಸಾಂ ಪೊಲೀಸರು ಹೇಳಿದ್ದಾರೆ.

ಈ ಫೋಟೋದಲ್ಲಿರುವ ಐವರು ಆರೋಪಿಗಳು ಬಾಲಕಿ ಮೇಲೆ ಹಲ್ಲೆ ನಡೆಸಿ ಹಿಂಸಿಸಿದ್ದಾರೆ. ಈ ವಿಡಿಯೋ ಎಲ್ಲಿ ಹಾಗೂ ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ನಿಮ್ಮಲ್ಲಿ ಯಾರಿಗಾದರೂ ಈ ಐವರು ಆರೋಪಿಗಳ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ ನಮ್ಮನ್ನ ಸಂಪರ್ಕಿಸಿ. ಆರೋಪಿಗಳ ಪತ್ತೆಗೆ ನೆರವಾಗುವವರಿಗೆ ಸೂಕ್ತ ಬಹುಮಾನವನ್ನ ನೀಡಲಾಗುವುದು ಎಂದು ಆಸ್ಸಾಂ ಪೊಲೀಸರು ಟ್ವೀಟಾಯಿಸಿದ್ದಾರೆ.

ಇನ್ನು ಈ ವಿಡಿಯೋ ಸಂಬಂಧ ಕೇಂದ್ರ ಸಚಿವ ಕಿರಣ್​ ರಿಜಿಜು ಸಹ ಟ್ವೀಟ್​ ಮಾಡಿದ್ದಾರೆ. ವೈರಲ್​ ಆಗಿರುವ ಈ ವಿಡಿಯೋ ಜೋದ್​ಪುರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಈ ಸಂಬಂಧ ನಾನು ಜೋಧ್​ಪುರದ ಪೊಲೀಸ್​ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದೇನೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...