ಬಾಲಕಿಯನ್ನ ಐವರು ದುಷ್ಕರ್ಮಿಗಳು ಕ್ರೂರವಾಗಿ ಹಿಂಸಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಆಸ್ಸಾಂನಲ್ಲಿ ನಡೆದ ಘಟನೆಯಾಗಿದೆ. ವಿಡಿಯೋದಲ್ಲಿ ಐವರು ಬಾಲಕಿಗೆ ಥಳಿಸಿ ಚಿತ್ರಹಿಂಸೆ ನೀಡಿದ್ದಾರೆ.
ಈ ಘಟನೆ ಎಲ್ಲಿ ಹಾಗೂ ಯಾವಾಗ ನಡೆಯಿತು ಅನ್ನೋದ್ರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಆದರೆ ವಿಡಿಯೋದಲ್ಲಿನ ಕೆಲ ಫೋಟೋಗಳನ್ನ ಆಸ್ಸಾಂ ಪೊಲೀಸರು ರಿಲೀಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆರೋಪಿಗಳ ಫೋಟೋ ಶೇರ್ ಮಾಡಿರುವ ಪೊಲೀಸರು ಸಾರ್ವಜನಿಕರ ಬಳಿ ಆರೋಪಿಗಳ ಪತ್ತೆಗೆ ಸಹಾಯ ಕೇಳಿದ್ದಾರೆ. ಆರೋಪಿಗಳನ್ನ ಪತ್ತೆ ಮಾಡುವಲ್ಲಿ ನೆರವಾಗುವವರಿಗೆ ಸೂಕ್ತ ಬಹುಮಾನವನ್ನೂ ನೀಡಲಾಗುವುದು ಎಂದು ಆಸ್ಸಾಂ ಪೊಲೀಸರು ಹೇಳಿದ್ದಾರೆ.
ಈ ಫೋಟೋದಲ್ಲಿರುವ ಐವರು ಆರೋಪಿಗಳು ಬಾಲಕಿ ಮೇಲೆ ಹಲ್ಲೆ ನಡೆಸಿ ಹಿಂಸಿಸಿದ್ದಾರೆ. ಈ ವಿಡಿಯೋ ಎಲ್ಲಿ ಹಾಗೂ ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ನಿಮ್ಮಲ್ಲಿ ಯಾರಿಗಾದರೂ ಈ ಐವರು ಆರೋಪಿಗಳ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ ನಮ್ಮನ್ನ ಸಂಪರ್ಕಿಸಿ. ಆರೋಪಿಗಳ ಪತ್ತೆಗೆ ನೆರವಾಗುವವರಿಗೆ ಸೂಕ್ತ ಬಹುಮಾನವನ್ನ ನೀಡಲಾಗುವುದು ಎಂದು ಆಸ್ಸಾಂ ಪೊಲೀಸರು ಟ್ವೀಟಾಯಿಸಿದ್ದಾರೆ.
ಇನ್ನು ಈ ವಿಡಿಯೋ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಸಹ ಟ್ವೀಟ್ ಮಾಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಜೋದ್ಪುರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಈ ಸಂಬಂಧ ನಾನು ಜೋಧ್ಪುರದ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದೇನೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಬರೆದಿದ್ದಾರೆ.