alex Certify ದೇಶದಲ್ಲಿ ಹೆಚ್ಚಾಗುತ್ತಿವೆ ಕೊರೊನಾ ಕೇಸ್..! ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ಹೆಚ್ಚಾಗುತ್ತಿವೆ ಕೊರೊನಾ ಕೇಸ್..! ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ…?

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತ ಜಾಗತಿಕ ಮಟ್ಟದಲ್ಲೂ ಟಾಪ್ 10 ಪಟ್ಟಿಯಲ್ಲಿ ಮೇಲೇರುತ್ತಿದೆ. 8 ಸ್ಥಾನದಲ್ಲಿದ್ದ ಭಾರತ ಈಗ ಏಳನೇ ಸ್ಥಾನಕ್ಕೆ ಏರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ 1,90,535 ಕೋವಿಡ್ ಪ್ರಕರಣ ದೃಢಪಟ್ಟಿದೆ.

ಹೌದು, ಲಾಕ್‌ಡೌನ್ ಸಡಿಲಿಕೆಯಾದಾಗಿನಿಂದಲೂ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಒಂದೇ ದಿನದಲ್ಲಿ 8,292 ಹೊಸ ಕೇಸ್‌ಗಳು ದೇಶದಲ್ಲಿ ಕಂಡು ಬಂದಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತ ಸಂಖ್ಯೆ 1,90,535ಕ್ಕೆ ಏರಿಕೆಯಾಗಿದೆ. ಇನ್ನು ಸಾವಿನ ಸಂಖ್ಯೆ 5,394 ಏರಿಕೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಕೊರೊನಾ ಟ್ರ್ಯಾಕರ್ ಪ್ರಕಾರ ಭಾರತ ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ. 98,716 ಸಕ್ರಿಯ ಕೇಸ್‌ಗಳಿದ್ದು, 91,891 ಕೇಸ್‌ಗಳಲ್ಲಿ ರೋಗಿಗಳು ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...