alex Certify ದಂಗಾಗಿಸುತ್ತೆ ಪೆಟ್ರೋಲ್ – ಡಿಸೇಲ್ ಮೇಲೆ ಭಾರತ ವಿಧಿಸುತ್ತಿರುವ ತೆರಿಗೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಪೆಟ್ರೋಲ್ – ಡಿಸೇಲ್ ಮೇಲೆ ಭಾರತ ವಿಧಿಸುತ್ತಿರುವ ತೆರಿಗೆ…?

ಲಾಕ್‌ಡೌನ್‌ನಿಂದಾಗಿ ಈಗಾಗಲೇ ಜನ ರೋಸಿ ಹೋಗಿದ್ದಾರೆ. ಅತ್ತ ಕೆಲಸವೂ ಇಲ್ಲ, ಇತ್ತ ಈ ಕೊರೊನಾ ತೊಲಗುತ್ತಿಲ್ಲ ಅಂತಾ ಹಿಡಿ ಶಾಪ ಹಾಕುತ್ತಿದ್ದಾರೆ. ಇದರ ನಡುವೆ ಬೆಲೆ ಏರಿಕೆಯಾಗಿದ್ದು, ಈ ಬೆಲೆ ಏರಿಕೆ ಜನರಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲೂ ಕಚ್ಚಾ ತೈಲದ ಬೆಲೆ ಏರಿಕೆ ನಿಜಕ್ಕೂ ಬೆಚ್ಚಿ ಬೀಳಿಸುತ್ತಿದೆ.

ಹೌದು, ಕಚ್ಚಾತೈಲಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿತ್ತು. ಒಂದು ಲೀಟರ್ ಪೆಟ್ರೋಲ್‌ಗೆ 10 ರೂಪಾಯಿ ಹಾಗೂ ಒಂದು ಲೀಟರ್ ಡೀಸೆಲ್‌ಗೆ 13 ರೂಪಾಯಿಯಷ್ಟು ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ಒಟ್ಟು ಏರಿಕೆ ಸುಂಕ ನಿಯಮ ಜಾರಿಗೆ ತಂದಿತ್ತು ಕೇಂದ್ರ ಸರ್ಕಾರ. ಭಾರತದಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ ಗ್ರಾಹಕರು ಶೇ.69 ತೆರಿಗೆ ಪಾವತಿಸಬೇಕಿದೆ.

ಇಲ್ಲಿಯವರೆಗೆ ಹೆಚ್ಚು ತೆರಿಗೆ ವಿಧಿಸುವ ರಾಷ್ಟ್ರಗಳ ಪೈಕಿ ಇಟಲಿ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್ ಎರಡನೇ ಸ್ಥಾನದಲ್ಲಿತ್ತು. ಇನ್ನು ಇವುಗಳ ನಂತರ ಜರ್ಮನಿ, ಇಂಗ್ಲೆಂಡ್, ಸ್ಪೇನ್, ಜಪಾನ್, ಕೆನಡಾ ಹಾಗೂ ಅಮೆರಿಕ ಇದ್ದವು. ಆದರೆ ಇದೀಗ ಭಾರತ ಮೊದಲ ಸ್ಥಾನಕ್ಕೆ ಬಂದಿದೆ. ಮತ್ತೊಂದು ಮುಖ್ಯ ವಿಚಾರ ಅಂದರೆ ಈಗ ವಿಧಿಸಿರುವ ತೆರಿಗೆ ಜನರ ಚಿಲ್ಲರೆ ವಹಿವಾಟಿಗೆ ಅನ್ವಯವಾಗುವುದಿಲ್ಲ. ಈ ಬೆಲೆ ಏರಿಕೆ ಕೇವಲ ತೈಲ ಕಂಪೆನಿಗಳಿಗೆ ಮಾತ್ರ ಅನ್ವಯವಾಗಲಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...