alex Certify ತಾಯಿ ಹೆಣ ಹೊತ್ತಿದ್ದ 5 ಮಕ್ಕಳೂ ಕೊರೊನಾಕ್ಕೆ ಬಲಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿ ಹೆಣ ಹೊತ್ತಿದ್ದ 5 ಮಕ್ಕಳೂ ಕೊರೊನಾಕ್ಕೆ ಬಲಿ…!

ಜಾರ್ಖಂಡ್‌ನ ಧನ್ಬಾದ್‌ನಲ್ಲಿ ಆಘಾತಕಾರಿ  ಪ್ರಕರಣವೊಂದು ಹೊರಬಿದ್ದಿದೆ. ಕೊರೊನಾ ವೈರಸ್ ಸೋಂಕು ಕುಟುಂಬವನ್ನೇ ಬಲಿ ಪಡೆದಿದೆ. ಈ ಕುಟುಂಬದ 6 ಸದಸ್ಯರು ಈವರೆಗೆ ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.

ಕೊರೊನಾ ಪೀಡಿತ ತಾಯಿಯ ಅಂತ್ಯಕ್ರಿಯೆಯಲ್ಲಿ ಇವರು ಪಾಲ್ಗೊಂಡಿದ್ದರು. ಹೆಣವನ್ನು ಮಕ್ಕಳು ಭುಜದ ಮೇಲೆ ಹೊತ್ತಿದ್ದರು. ತಾಯಿಯ ಮರಣದ ನಂತರ  5 ಗಂಡು ಮಕ್ಕಳು ಒಬ್ಬೊಬ್ಬರಾಗಿ ಸಾವನ್ನಪ್ಪಿದ್ದಾರೆ. ಆರನೇ ಮಗನ ಸ್ಥಿತಿ ಗಂಭೀರವಾಗಿದೆ.

ಧನ್ಬಾದ್ ನಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಇದುವರೆಗೆ 8 ಜನರು ಸಾವನ್ನಪ್ಪಿದ್ದಾರೆ.  15 ದಿನಗಳಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿರುವುದು ಭಾರತದಲ್ಲಿ ಇದೇ ಮೊದಲು. ಕುಟುಂಬದ ಇತರ ಸದಸ್ಯರು ಅನಾರೋಗ್ಯಕ್ಕೊಳಗಾಗಿದ್ದು, ಮನೆಯಲ್ಲಿ ಭಯದ ವಾತಾವರಣ ಮನೆ ಮಾಡಿದೆ. 88 ವರ್ಷದ ತಾಯಿ ಸತ್ತ ಮೇಲೆ ಬೇರೆ ಬೇರೆ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದರು. ತಾಯಿ ಜೂನ್ ನಲ್ಲಿ ದೆಹಲಿಯ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಳು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...