ತಮಿಳುನಾಡಿನ ಟುಟಿಕೋರಿನ್ನಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪಕ್ಕದ ಮನೆ ವ್ಯಕ್ತಿ ಎಂಟು ವರ್ಷದ ಬಾಲಕಿಯನ್ನು ಕೊಂದಿದ್ದಾನೆ. ಆರೋಪಿ ಮನೆಗೆ ಬಂದ ಬಾಲಕಿ ಟಿವಿ ಹಚ್ಚಿದ್ದೇ ತಪ್ಪಾಗಿದೆ. ಆರೋಪಿ ಟಿವಿ ನೋಡದಂತೆ ಹೇಳಿದ್ದಾನೆ. ಆದ್ರೆ ಆಕೆ ಟಿವಿ ಹಚ್ಚಿದ್ದಾಳೆ.
ಕೋಪಗೊಂಡ ಆರೋಪಿ ಆಕೆ ಕತ್ತು ಹಿಸುಕಿದ್ದಾನೆ. ನಂತ್ರ ಶವವನ್ನು ನೀರಿನ ತೊಟ್ಟಿಗೆ ಹಾಕಿದ್ದಾನೆ. ಹುಡುಗಿ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದಳು. ತಾಯಿ ಕೆಲಸಕ್ಕೆ ಹೋದ ನಂತರ, ಹುಡುಗಿ ಪಕ್ಕದ ಮುತೀಶ್ವರಂ ಮನೆಯಲ್ಲಿ ಟಿವಿ ನೋಡಲು ಹೋಗಿದ್ದಳು.
ಬುಧವಾರ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿ ಮಾನಸಿಕ ಅಸ್ವಸ್ಥ ತಂದೆಯನ್ನು ಹೊಡೆದಿದ್ದ ಎನ್ನಲಾಗಿದೆ.