alex Certify ಜೂನ್ 5 ರಂದು ಆಗಸದಲ್ಲಿ ಸಂಭವಿಸಲಿದೆ ಕೌತುಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್ 5 ರಂದು ಆಗಸದಲ್ಲಿ ಸಂಭವಿಸಲಿದೆ ಕೌತುಕ..!

ಇದೇ ಜೂನ್‌ 5ರಂದು ಚಂದ್ರ ಗ್ರಹಣ ಇದೆ. ಈ ವರ್ಷದ ಎರಡನೇ ಚಂದ್ರಗ್ರಹಣ ಇದಾಗಿದೆ. ಆದರೆ ಈ ಚಂದ್ರ ಗ್ರಹಣವು ಸಾಮಾನ್ಯವಾಗಿ ಸಂಭವಿಸುವ ಚಂದ್ರ ಗ್ರಹಣಕ್ಕಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ನೀವು ಚಂದ್ರನನ್ನೂ ನೋಡಬಹುದು.

ಹುಣ್ಣಿಮೆಯಂದು ಅಂದರೆ ಜೂನ್‌ 5 ರ ರಾತ್ರಿ 11-15 ಕ್ಕೆ ಗ್ರಹಣ ಆರಂಭವಾಗಲಿದ್ದು, ಜೂನ್‌ 6 ರ ಬೆಳಗಿನ ಜಾವ 2-34 ಕ್ಕೆ ಕೊನೆಗೊಳ್ಳಲಿದೆ. ಜೂನ್‌ 6 ರ ಬೆಳಗಿನ ಜಾವ 12.54 ಕ್ಕೆ ಗ್ರಹಣ ಸ್ಪಷ್ಟವಾಗಿ ಕಾಣಲಿದೆ.

ಮತ್ತೊಂದು ವಿಶೇಷ ಅಂದರೆ ಗ್ರಹಣದ ಸಮಯದಲ್ಲಿ ಚಂದ್ರನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಅರ್ಧಾಕಾರದಲ್ಲಿ ಚಂದ್ರನು ಗೋಚರಿಸುವುದಿಲ್ಲ. ಈ ಚಂದ್ರಗ್ರಹಣ ದಕ್ಷಿಣ ಅಮೆರಿಕಾ, ಯುರೋಪ್‌, ಆಫ್ರಿಕಾ, ಏಷ್ಯಾದ ಕೆಲವು ಭಾಗಗಳಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇನ್ನು ಜೂನ್ ತಿಂಗಳಲ್ಲಿಯೇ ಎರಡು ಬಾರಿ ಗ್ರಹಣ ಸಂಭವಿಸಲಿದೆ. ಜೂನ್ 5 ರಂದು ಚಂದ್ರ ಗ್ರಹಣವಿದ್ದು, ಜೂನ್ 21 ರಂದು ಸೂರ್ಯಗ್ರಹಣ ಸಂಭವಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...