alex Certify ‘ಜನ್ ಧನ್’ ಯೋಜನೆಯಡಿ ತೆರೆಯಲ್ಪಟ್ಟಿದೆ ಇಷ್ಟು ಖಾತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜನ್ ಧನ್’ ಯೋಜನೆಯಡಿ ತೆರೆಯಲ್ಪಟ್ಟಿದೆ ಇಷ್ಟು ಖಾತೆ

ಪ್ರಧಾನ್ ಮಂತ್ರಿ ಜನ ಧನ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಜನ್ ಧನ್ ಯೋಜನೆಯಡಿ ದೇಶದಲ್ಲಿ 40 ಕೋಟಿ 35 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.  ಆರು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಈ ಯೋಜನೆಯ ಬಗ್ಗೆ ಘೋಷಣೆ ಮಾಡಿದ್ದರು.

ಬ್ಯಾಂಕ್ ಖಾತೆಗಳನ್ನು ಹೊಂದಿರದವರ ಅನುಕೂಲಕ್ಕಾಗಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ಸರ್ಕಾರದ ಈ ಯೋಜನೆ ಬಡತನ ನಿವಾರಣೆಯ ಗೇಮ್ ಚೇಂಜರ್ ಎನ್ನಲಾಗಿದೆ. ಲಕ್ಷಾಂತರ ಮಂದಿ ಇದ್ರ ಲಾಭ ಪಡೆದಿದ್ದಾರೆ.

ಮೋದಿ  ಯೋಜನೆಯ ಅಂಕಿಅಂಶಗಳನ್ನು ಗ್ರಾಫಿಕ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ. ಅವರ ಪ್ರಕಾರ, ಮೊದಲ ವರ್ಷದಲ್ಲಿ 17.90 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಎರಡನೇ ವರ್ಷದಲ್ಲಿ ಈ ಸಂಖ್ಯೆ 25.10 ಕೋಟಿಗೆ ಹೆಚ್ಚಾಗಿದೆ. ಮೂರನೇ ವರ್ಷದಲ್ಲಿ 30.09 ಕೋಟಿ ಮತ್ತು ನಾಲ್ಕನೇ ವರ್ಷದಲ್ಲಿ 32.54 ಕೋಟಿ ಖಾತೆಗಳನ್ನು ಯೋಜನೆಯಡಿ ತೆರೆಯಲಾಗಿದೆ. ಐದನೇ ವರ್ಷದ ಸಂಖ್ಯೆ 36.79 ಕೋಟಿಯಾದ್ರೆ ಆರನೇ ವರ್ಷದಲ್ಲಿ 40 ಕೋಟಿ ದಾಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...