ಪ್ರಧಾನ್ ಮಂತ್ರಿ ಜನ ಧನ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ಜನ್ ಧನ್ ಯೋಜನೆಯಡಿ ದೇಶದಲ್ಲಿ 40 ಕೋಟಿ 35 ಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಆರು ವರ್ಷಗಳ ಹಿಂದೆ ಪ್ರಧಾನ ಮಂತ್ರಿ ಈ ಯೋಜನೆಯ ಬಗ್ಗೆ ಘೋಷಣೆ ಮಾಡಿದ್ದರು.
ಬ್ಯಾಂಕ್ ಖಾತೆಗಳನ್ನು ಹೊಂದಿರದವರ ಅನುಕೂಲಕ್ಕಾಗಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ಸರ್ಕಾರದ ಈ ಯೋಜನೆ ಬಡತನ ನಿವಾರಣೆಯ ಗೇಮ್ ಚೇಂಜರ್ ಎನ್ನಲಾಗಿದೆ. ಲಕ್ಷಾಂತರ ಮಂದಿ ಇದ್ರ ಲಾಭ ಪಡೆದಿದ್ದಾರೆ.
ಮೋದಿ ಯೋಜನೆಯ ಅಂಕಿಅಂಶಗಳನ್ನು ಗ್ರಾಫಿಕ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ. ಅವರ ಪ್ರಕಾರ, ಮೊದಲ ವರ್ಷದಲ್ಲಿ 17.90 ಕೋಟಿ ಖಾತೆಗಳನ್ನು ತೆರೆಯಲಾಗಿದೆ. ಎರಡನೇ ವರ್ಷದಲ್ಲಿ ಈ ಸಂಖ್ಯೆ 25.10 ಕೋಟಿಗೆ ಹೆಚ್ಚಾಗಿದೆ. ಮೂರನೇ ವರ್ಷದಲ್ಲಿ 30.09 ಕೋಟಿ ಮತ್ತು ನಾಲ್ಕನೇ ವರ್ಷದಲ್ಲಿ 32.54 ಕೋಟಿ ಖಾತೆಗಳನ್ನು ಯೋಜನೆಯಡಿ ತೆರೆಯಲಾಗಿದೆ. ಐದನೇ ವರ್ಷದ ಸಂಖ್ಯೆ 36.79 ಕೋಟಿಯಾದ್ರೆ ಆರನೇ ವರ್ಷದಲ್ಲಿ 40 ಕೋಟಿ ದಾಟಿದೆ.