ತಿರುವನಂತಪುರಂ: ರೈಲಿನಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಗಳನ್ನು ಸಾಗಾಟ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಕೇರಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ನಲ್ಲಿ ಮಹಿಳೆ 100 ಜಿಲೆಟಿನ್ ಕಡ್ಡಿ ಹಾಗೂ 350 ಡಿಟೋನೇಟರ್ ಗಳನ್ನು ಸಾಗಿಸುತ್ತಿದ್ದಳು. ಕೋಯಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ವೇಳೆ ಮಹಿಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ
ಬಾವಿ ತೋಡಲೆಂದು ಜಿಲೆಟಿನ್ ಕಡ್ಡಿ ಸಾಗಿಸುತ್ತಿದ್ದುದಾಗಿ ಮಹಿಳೆ ತಿಳಿಸಿದ್ದಾಳೆ. ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ