alex Certify ಗ್ರಾಹಕರಿಗೆ ʼಸುಪ್ರೀಂʼ ಶಾಕ್: ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಅಸಾಧ್ಯ ಎಂದ ನ್ಯಾಯಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ʼಸುಪ್ರೀಂʼ ಶಾಕ್: ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಅಸಾಧ್ಯ ಎಂದ ನ್ಯಾಯಾಲಯ

ನವದೆಹಲಿ: ಸಾಲ ವಿನಾಯಿತಿ ವಿಸ್ತರಣೆ, ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಯಾವುದೇ ಹಣಕಾಸು ಪ್ಯಾಕೇಜ್ ರೀತಿಯಲ್ಲಿ ಪರಿಹಾರ ನೀಡುವಂತೆ ಸರ್ಕಾರಕ್ಕಾಗಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗಾಗಲಿ ನಿರ್ದೇಶನ ನೀಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಆರ್.ಬಿ.ಐ ಸಾಲ ವಿನಾಯಿತಿ ಅವಧಿ 6 ತಿಂಗಳು ವಿಸ್ತರಿಸಬೇಕು ಎಂದು ಕೋರಿ ವಿವಿಧ ವಾಣಿಜ್ಯ ಒಕ್ಕೂಟಗಳು ಹಾಗೂ ಕಾರ್ಪೊರೇಟ್ ಕಂಪನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿ ತಿರಸ್ಕರಿಸಿದ್ದು ಸಾಲ ವಿನಾಯಿತಿ ವಿಸ್ತರಣೆ, ಸಂಪೂರ್ಣ ಬಡ್ಡಿ ಮನ್ನಾ ಸಾಧ್ಯವಿಲ್ಲ ಎಂದು ತಿಳಿಸಿದೆ.

ಗಮನಿಸಿ: ಪಾನ್ ಕಾರ್ಡ್ ಗೆ ʼಆಧಾರ್ʼ ಲಿಂಕ್ ಮಾಡದಿದ್ದರೆ ಸ್ಥಗಿತಗೊಳ್ಳಲಿದೆ ನಿಮ್ಮ ಪಾನ್ ಸಂಖ್ಯೆ

ಕೋವಿಡ್ ಬಿಕ್ಕಟ್ಟಿನ ವೇಳೆ ಕಳೆದ ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಿಸಿದ್ದ ಸಂದರ್ಭದಲ್ಲಿ ಆರ್.ಬಿ.ಐ. ಮಾರ್ಚ್ 1ರಿಂದ ಮೇ 31ರವರೆಗೆ ಬ್ಯಾಂಕ್ ಗಳ ಸಾಲದ ಕಂತು ಕಟ್ಟುವುದರಿಂದ ಗ್ರಾಹಕರಿಗೆ ವಿನಾಯಿತಿ ಘೋಷಿಸುವಂತೆ ಬ್ಯಾಂಕ್ ಗಳಿಗೆ ಸೂಚಿಸಿತ್ತು. ಬಳಿಕ ಆಗಸ್ಟ್ 31ರವರೆಗೂ ವಿನಾಯಿತಿ ವಿಸ್ತರಿಸಲಾಗಿತ್ತು. ಈ ಅವಕಾಶ ಪಡೆದ ಕಂಪನಿಗಳು, ಗ್ರಾಹಕರು 6 ತಿಂಗಳು ಸಾಲದ ಕಂತು ಕಟ್ಟಿರಲಿಲ್ಲ. ಬಳಿಕ ಬ್ಯಾಂಕ್ ಗಳು ಇಎಂಐ ಅಸಲಿ ಹಣದ ಜೊತೆಗೆ ಬಡ್ಡಿ, ಚಕ್ರಬಡ್ಡಿಯನ್ನು ಗ್ರಾಹಕರ ಮೇಲೆ ಹೇರಿದ್ದವು. ಇದನ್ನು ಪ್ರಶ್ನಿಸಿ ಗ್ರಾಹಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...