ಗೋವುಗಳ ರಕ್ಷಣೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಮುಂದಾಗಿರುವ ಮಧ್ಯಪ್ರದೇಶ ಸರ್ಕಾರ ಇದಕ್ಕಾಗಿ ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲು ಗೋವಿನ ಮೇಲ್ತೆರಿಗೆ ವಿಧಿಸಲು ನಿರ್ಧರಿಸಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಈ ವಿಷಯವನ್ನು ತಿಳಿಸಿದ್ದು, ಒಂದೊಮ್ಮೆ ಈ ತೆರಿಗೆ ಜಾರಿಗೊಳಿಸಿದರೆ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸಾಲಿಗೆ ಸೇರಿಕೊಂಡಂತಾಗುತ್ತದೆ.
ಗೋವುಗಳ ರಕ್ಷಣೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ ಬಳಿಕ ರಾಜ್ಯದಾದ್ಯಂತ 2000 ಗೋ ಶಾಲೆಗಳನ್ನು ಸ್ಥಾಪಿಸಿ ವಿವಿಧ ತಳಿಗಳನ್ನು ರಕ್ಷಿಸಲಾಗುತ್ತದೆ.