alex Certify ಗಮನಿಸಿ: ಕೊರೊನಾ ಸೋಂಕಿಗೆ ಹೊಸ ರೋಗ ಲಕ್ಷಣ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಕೊರೊನಾ ಸೋಂಕಿಗೆ ಹೊಸ ರೋಗ ಲಕ್ಷಣ ಸೇರ್ಪಡೆ

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದೆ. ವಿಶ್ವದಲ್ಲಿ ಇದಕ್ಕೆ ಈಗಾಗಲೇ ಲಕ್ಷಾಂತರ ಮಂದಿ ಬಲಿಯಾಗಿದ್ದು, ಸೋಂಕು ಪೀಡಿತರ ಸಂಖ್ಯೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಿದೆ.

ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ವಿಶ್ವದ ಎಲ್ಲ ರಾಷ್ಟ್ರಗಳು ಪ್ರಯತ್ನ ನಡೆಸುತ್ತಿದ್ದು,, ಆದರೆ ಈವರೆಗೆ ಅದಕ್ಕೆ ಯಶಸ್ಸು ಸಿಕ್ಕಿಲ್ಲ. ಇದರ ಮಧ್ಯೆ ಕೊರೊನಾ ಸೋಂಕಿಗೆ ಹೊಸ ರೋಗ ಲಕ್ಷಣಗಳು ಸೇರ್ಪಡೆಯಾಗುತ್ತಲೇ ಸಾಗುತ್ತಿದೆ.

ಕಣ್ಣು ಬೇನೆಯೂ ಕೊರೊನಾ ರೋಗ ಲಕ್ಷಣಗಳ ಪೈಕಿ ಒಂದು ಎಂದು ಹೇಳಲಾಗಿದ್ದು, ಆದರೆ ಕಣ್ಣುಬೇನೆ ಇರುವವರೆಲ್ಲ ಸೋಂಕಿತರು ಎಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಶೇಕಡಾ 1 ರಿಂದ 3 ರಷ್ಟು ರೋಗಿಗಳಲ್ಲಿ ಮಾತ್ರ ಈ ಲಕ್ಷಣ ಕಂಡು ಬರಲಿದ್ದು, ಆದರೂ ಕೂಡ ಕಣ್ಣುಬೇನೆ ಕಾಣಿಸಿಕೊಂಡರೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...