alex Certify ಗಮನಿಸಿ: ಇಂದಿನಿಂದ ಬದಲಾಗಿದೆ ದ್ವಿಚಕ್ರ ವಾಹನ ಕುರಿತ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಇಂದಿನಿಂದ ಬದಲಾಗಿದೆ ದ್ವಿಚಕ್ರ ವಾಹನ ಕುರಿತ ಈ ನಿಯಮ

ಸುರಕ್ಷಿತ ಸಂಚಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆಧ್ಯತೆಯನ್ನು ನೀಡ್ತಿದೆ. ಈ ಕಾರಣದಿಂದಾಗಿ ಸರ್ಕಾರ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಸಾರಿಗೆ ಸಚಿವಾಲಯವು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಆ ನಿಯಮಗಳು ಇಂದಿನಿಂದ ಜಾರಿಗೆ ಬರಲಿವೆ.

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ, ಬೈಕ್‌ನ ಎರಡೂ ಬದಿಗಳಲ್ಲಿ, ಚಾಲಕನ ಸೀಟಿನ ಹಿಂದೆ ಹಿಡಿಕೆ ಇರಬೇಕು. ಹಿಂದೆ ಕುಳಿತ ಪ್ರಯಾಣಿಕನ ಸುರಕ್ಷತೆ ಇದ್ರ ಉದ್ದೇಶವಾಗಿದೆ. ಬಹುತೇಕ ದ್ವಿ ಚಕ್ರವಾಹನಗಳಲ್ಲಿ ಈ ವ್ಯವಸ್ಥೆಯಿಲ್ಲ. ಇದಲ್ಲದೆ, ಬೈಕ್ ‌ನ ಹಿಂಭಾಗದಲ್ಲಿ ಕುಳಿತವನಿಗೆ ಎರಡೂ ಕಡೆಗಳಲ್ಲಿ ಫೂಟ್‌ ರೆಸ್ಟ್ ಸಹ ಕಡ್ಡಾಯವಾಗಿದೆ.

ಮಾರ್ಗಸೂಚಿಯಲ್ಲಿ ಬೈಕ್‌‌ ನ ಹಿಂದಿನ ಚಕ್ರದ ಎಡಭಾಗದ ಅರ್ಧದಷ್ಟು ಭಾಗವನ್ನು ಸುರಕ್ಷಿತವಾಗಿ ಮುಚ್ಚಬೇಕು ಎನ್ನಲಾಗಿದೆ. ಹಿಂದೆ ಕುಳಿತವರ ಬಟ್ಟೆ ಗಾಲಿಗೆ ಸಿಗುವ ಅಪಾಯ ತಪ್ಪಿಸುವುದು ಇದ್ರ ಉದ್ದೇಶವಾಗಿದೆ.

ಹಗುರವಾದ ಕಂಟೇನರ್ ಬೈಕ್‌ನಲ್ಲಿ ಇರಿಸಲು ಸಾರಿಗೆ ಸಚಿವಾಲಯ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಈ ಕಂಟೇನರ್ ಉದ್ದ 550 ಮಿಮೀ, ಅಗಲ 510 ಮಿಲಿ ಮತ್ತು ಎತ್ತರ 500 ಮಿಮೀಗಿಂತ ಹೆಚ್ಚಿರಬಾರದು. ಬೈಕ್ ಹಿಂದಿನ ಸೀಟಿನಲ್ಲಿ ಕಂಟೇನರ್ ಇದ್ದರೆ ಹಿಂಬದಿ ಸೀಟಿನಲ್ಲಿ ಪ್ರಯಾಣಿಕ ಕುಳಿತುಕೊಳ್ಳಲು ಸಾಧ್ಯವಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...