alex Certify ಕ್ಯಾಬಿನೆಟ್ ಸಭೆ: ಎಥೆನಾಲ್ ಬೆಲೆ ಹೆಚ್ಚಳ, ಸೆಣಬಿನ ಚೀಲದ ಬಗ್ಗೆ ಮಹತ್ವದ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಬಿನೆಟ್ ಸಭೆ: ಎಥೆನಾಲ್ ಬೆಲೆ ಹೆಚ್ಚಳ, ಸೆಣಬಿನ ಚೀಲದ ಬಗ್ಗೆ ಮಹತ್ವದ ನಿರ್ಧಾರ

Air pollution: Environment Minister Prakash Javadekar says no direct correlation with shorter life

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸಂಪುಟ ನಿರ್ಧಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಎಥೆನಾಲ್, ಸೆಣಬು ಮತ್ತು ಅಣೆಕಟ್ಟುಗಳ ಬಗ್ಗೆ ಸಂಪುಟ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಎಥೆನಾಲ್ ಖರೀದಿಗೆ ಹೊಸ ವ್ಯವಸ್ಥೆಯನ್ನು ಕೇಂದ್ರ ಸಚಿವ ಸಂಪುಟ ಗುರುವಾರ ಅಂಗೀಕರಿಸಿದೆ ಬೆಲೆಗಳನ್ನು ಹೆಚ್ಚಿಸಲಾಗಿದೆ. 2021ರಲ್ಲಿ ಎಥೆನಾಲ್ ಹೊಸ ದರ ಜಾರಿಗೆ ಬರಲಿದೆ. ಪ್ರತಿ ಲೀಟರ್‌ ಎಥೆನಾಲ್ ಬೆಲೆ 62.65 ರೂಪಾಯಿಯಾಗಲಿದೆ.

ಸೆಣಬಿನ ಚೀಲಗಳನ್ನು ಉತ್ತೇಜಿಸಲೂ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆಹಾರ ಧಾನ್ಯಗಳನ್ನು ಸೆಣಬಿನ ಚೀಲಗಳಲ್ಲಿ ತುಂಬಿಸುವುದು ಕಡ್ಡಾಯವಾಗಿದೆ. ಇನ್ಮುಂದೆ ಶೇಕಡಾ 100 ರಷ್ಟು ಆಹಾರ ಧಾನ್ಯಗಳನ್ನು ಸೆಣಬಿನ ಚೀಲಗಳಲ್ಲಿ ಮತ್ತು ಶೇಕಡಾ 20 ರಷ್ಟು ಸಕ್ಕರೆಯನ್ನು ಸೆಣಬಿನ ಚೀಲಗಳಲ್ಲಿ ತುಂಬಿಸಬೇಕಾಗಿದೆ. ಸೆಣಬಿನ ಚೀಲಗಳ ಬೆಲೆಯನ್ನು ಸಮಿತಿ ನಿರ್ಧರಿಸಲಿದೆ.

ಅಣೆಕಟ್ಟುಗಳ ಸುರಕ್ಷತೆ ಮತ್ತು ನಿರ್ವಹಣೆಗಾಗಿ ಯೋಜನೆಯ ಎರಡನೇ ಮತ್ತು ಮೂರನೇ ಹಂತಗಳನ್ನು ಅನುಮೋದಿಸಲಾಗಿದೆ. ಈ ಯೋಜನೆಯಡಿ ಹೊಸ ತಂತ್ರಜ್ಞಾನ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು. ಸಾಕಷ್ಟು ಹಳೆಯದಾದ ಅಣೆಕಟ್ಟುಗಳ ಸ್ಥಿತಿಯನ್ನು ಸುಧಾರಿಸಲಾಗುವುದು. ಈ ಯೋಜನೆಯಲ್ಲಿ 19 ರಾಜ್ಯಗಳನ್ನು ಸೇರಿಸಲಾಗಿದೆ. ಯೋಜನೆಯ ಎರಡನೇ ಹಂತದಲ್ಲಿ ಅಣೆಕಟ್ಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದ. ಆರಂಭದಲ್ಲಿ ಒಟ್ಟು 736 ಅಣೆಕಟ್ಟುಗಳನ್ನು ಯೋಜನೆಗೆ ಸೇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...