ಮಧುರೈ: ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದರೂ, ಲಾಕ್ ಡೌನ್ ನಿಯಮ ಜಾರಿಯಾಗಿದ್ದರೂ ಜನ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಹೇಗೆಲ್ಲ ಕಣ್ತಪ್ಪಿಸಿ ಸಂಭ್ರಮಿಸಬಹುದು ಎಂಬುದಕ್ಕೆ ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಿದ್ದಾರೆ.
ಇದೀಗ ನವಜೋಡಿಯೊಂದು ಕೋವಿಡ್ ನಿರ್ಬಂಧಗಳನ್ನು ತಪ್ಪಿಸಿ ವಿಮಾನದಲ್ಲಿ ಮದುವೆಯಾಗುವ ಮೂಲಕ ಗಮನ ಸೆಳೆದಿದೆ.
ವಿಂಟೇಜ್ ಕಾರಿನೊಂದಿಗೆ ಫೋಟೋ ಶೇರ್ ಮಾಡಿದ ಗೇಲ್
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಸಭೆ-ಸಮಾರಂಭ, ವಿವಾಹಗಳಿಗೆ ನಿರ್ಬಂಧ ವಿಧಿಸಲಾಗಿದೆ. ತಮಿಳುನಾಡಿನಲ್ಲಿ ಕೂಡ ಲಾಕ್ ಡೌನ್ ಜಾರಿಯಾಗಿದೆ. ಆದರೆ ಮಧುರೈನ ರಾಕೇಶ್ ಹಾಗೂ ದೀಕ್ಷಣಾ ಎಂಬ ಜೋಡಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ವಿಮಾನದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದಾರೆ.
ʼಲಸಿಕಾ ಕೇಂದ್ರʼವಾಗಿ ಬದಲಾಯ್ತು ಮೋಜುಮಸ್ತಿಯ ತಾಣ
ಎರಡು ಗಂಟೆಗಳ ಕಾಲ ವಿಮಾನ ಬಾಡಿಗೆಗೆ ಪಡೆದು, ನವಜೋಡಿ ವಿಮಾನದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಬರೋಬ್ಬರಿ 130 ಸಂಬಂಧಿಕರು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿವಾಹ ಸಮಾರಂಭದ ವೇಳೆ ಸಾಮಾಜಿಕ ಅಂತರ, ಮಾಸ್ಕ್ ಯಾವುದೇ ನಿಯಮ ಪಾಲನೆ ಮಾಡಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆ ನವಜೋಡಿಗೆ ತನಿಖೆ ಸಂಕಷ್ಟ ಎದುರಾಗಿದೆ. ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ನವದಂಪತಿ ಜೊತೆಗೆ ಸ್ಪೈಸ್ ಜೆಟ್ ವಿಮಾನ ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲಾಗುತ್ತಿದೆ.