alex Certify ಕೊರೊನಾ ಮುಕ್ತ ರಾಜ್ಯವಾಗಿ ಮಾದರಿಯಾಗಿದೆ ಗೋವಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮುಕ್ತ ರಾಜ್ಯವಾಗಿ ಮಾದರಿಯಾಗಿದೆ ಗೋವಾ

सातों मरीज ठीक, जानें सरकार ने ऐसा क्या किया कि गोवा हो गया कोरोना फ्री

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಗೋವಾ ಕೊರೊನಾ ಮುಕ್ತ ರಾಜ್ಯವಾಗಿದೆ. ಗೋವಾದಲ್ಲಿ ಕೊರೊನಾ ಸೋಂಕಿತ ಒಬ್ಬ ವ್ಯಕ್ತಿಯೂ ಇಲ್ಲ. ಗೋವಾ ಅಳವಡಿಸಿಕೊಂಡ ನಿಯಮಗಳು ದೇಶಕ್ಕೆ ಮಾದರಿಯಾಗಬೇಕಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜ್ಯದಲ್ಲಿ ಒಬ್ಬ ಕೋವಿಡ್ -19 ರೋಗಿಯೂ ಇಲ್ಲ ಎಂದು ಘೋಷಿಸಿದ್ದಾರೆ. ಅದೇ ಸಮಯದಲ್ಲಿ ಇದುವರೆಗೆ ಮಾಡಿದಂತೆ ಮೇ 3 ರವರೆಗೆ ಲಾಕ್ಡೌನ್ ಗಂಭೀರವಾಗಿ ಜಾರಿಯಲ್ಲಿರಲಿದೆ ಎಂದಿದ್ದಾರೆ.

ಗೋವಾದಲ್ಲಿ 7 ಸೋಂಕಿತರು ಕಂಡು ಬಂದಿದ್ದರು. ಅವ್ರಿಗೆ ಚಿಕಿತ್ಸೆ ನೀಡುವ ಜೊತೆಗೆ ಅವ್ರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಿ  ಚಿಕಿತ್ಸೆ ನೀಡಲಾಯ್ತು. ಎಲ್ಲ 7 ರೋಗಿಗಳು ಗುಣಮುಖರಾಗಿದ್ದು, ಮತ್ತ್ಯಾರಿಗೂ ಸೋಂಕು ಕಾಣಿಸಿಕೊಂಡಿಲ್ಲ.

ಸೋಂಕು ಕಾಣಿಸಿಕೊಂಡ ತಕ್ಷಣ ಸರ್ಕಾರ ಗಡಿ ಬಂದ್ ಮಾಡಿತ್ತು. ಇದು ಸರ್ಕಾರ ತೆಗೆದುಕೊಂಡ ಮೊದಲ ನಿರ್ಧಾರ. ವಿದೇಶದಿಂದ ಬಂದವರಿಗೆ ಚಿಕಿತ್ಸೆ ನೀಡಲಾಗಿತ್ತು. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ತಪ್ಪದೆ ಪಾಲಿಸಲಾಗ್ತಿದೆ. ಕೆಲ ಕಂಪನಿಗಳಿಗೆ ಕೆಲಸ ಮಾಡಲು ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗ್ತಿದೆ.

ಗೋವಾ ಪ್ರಸಿದ್ಧ ಪ್ರವಾಸಿ ಕೇಂದ್ರ. ವಿದೇಶಿಗರ ಸಂಖ್ಯೆ ಅಲ್ಲಿ ಹೆಚ್ಚು. ಅಲ್ಲಿ ಸೋಂಕು ನಿಯಂತ್ರಣ ಕಷ್ಟ ಎನ್ನಲಾಗ್ತಾಯಿತ್ತು. ಆದ್ರೆ ಗೋವಾ ಸೋಂಕು ಮುಕ್ತ ರಾಜ್ಯವಾಗಿ ಎಲ್ಲ ರಾಜ್ಯಕ್ಕೆ ಮಾದರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...