
ಉತ್ತರ ಪ್ರದೇಶದ ವಾರಣಾಸಿಯ ವೈದ್ಯರು ಹಾಗೂ ಮುಂಚೂಣಿ ಕಾರ್ಯಕರ್ತರ ಜೊತೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಮೋದಿ ಜಹಾ ಬಿಮಾರ್, ವಹಿ ಉಪಚಾರ್ ( ಎಲ್ಲಿ ಕಾಯಿಲೆ ಇರುತ್ತದೆಯೋ ಅಲ್ಲೆಲ್ಲ ಮನೆ ಬಾಗಿಲಿಗೇ ಚಿಕಿತ್ಸೆ) ಎಂಬ ಸಂದೇಶವನ್ನ ಸಾರಿದ್ರು. ಈ ರೀತಿ ಮಾಡೋದ್ರಿಂದ ಕೊರೊನಾ 2ನೇ ಅಲೆಯಿಂದ ದೇಶದಲ್ಲಿ ವೈದ್ಯಕೀಯ ಲೋಕದ ಮೇಲಿರುವ ಒತ್ತಡವನ್ನ ಕಡಿಮೆ ಮಾಡುತ್ತದೆ ಎಂದು ಹೇಳಿದ್ರು.
ಅಲ್ಲದೇ ಕೊರೊನಾ ಎರಡನೆ ಅಲೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ಈ ವೈರಸ್ನಿಂದಾಗಿ ನಮ್ಮ ಪ್ರೀತಿಪಾತ್ರರು ನಮ್ಮನ್ನ ಅಗಲಿದ್ದಾರೆ ಎಂದು ಹೇಳುತ್ತಾ ಭಾವುಕರಾದ್ರು.
ವಾರಣಾಸಿ ಕ್ಷೇತ್ರದ ಸಂಸದರಾಗಿರುವ ಪ್ರಧಾನಿ ಮೋದಿ ಅಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ ಸಂಬಂಧ ಕಳವಳ ವ್ಯಕ್ತಪಡಿಸಿದ್ರು. ಮಾತ್ರವಲ್ಲದೇ ಯಾವುದೇ ಕಾರಣಕ್ಕೂ ಕೊರೊನಾ ನಿರ್ಬಂಧಗಳನ್ನ ಸಡಿಲಿಸಬಾರದು. ಉತ್ತರ ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೂ ಸಹ ಜನರು ಎಚ್ಚರಿಕೆಯಿಂದ ಎಲ್ಲಾ ಕೋವಿಡ್ ಮಾನದಂಡಗಳನ್ನ ಪಾಲಿಸದಿರೋದನ್ನ ಮರೆಯದಿರಿ ಎಂದು ಮನವಿ ಮಾಡಿದ್ದಾರೆ.