alex Certify ಕೊರೊನಾ ನಡುವೆ ವಿಭಿನ್ನವಾಗಿ ಮದುವೆ; ಕೋಲುಗಳನ್ನು ಬಳಸಿ ಹಾರ ಬದಲಿಸಿಕೊಂಡ ವಧು-ವರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಡುವೆ ವಿಭಿನ್ನವಾಗಿ ಮದುವೆ; ಕೋಲುಗಳನ್ನು ಬಳಸಿ ಹಾರ ಬದಲಿಸಿಕೊಂಡ ವಧು-ವರರು

ಪಾಟ್ನಾ: ತಾವು ಹೇಗೆಲ್ಲ ವಿಶೇಷವಾಗಿ, ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡಬೇಕು ಎಂದು ವಧು-ವರರು ಏನೆಲ್ಲ ಕನಸು ಕಂಡಿರುತ್ತಾರೆ…ಎಷ್ಟೆಲ್ಲಾ ಪ್ಲಾನ್ ಮಾಡಿರುತ್ತಾರೆ… ಆದರೆ ಕೊರೊನಾ ಸೋಂಕು ಆ ಎಲ್ಲಾ ಕನಸುಗಳಿಗೆ ತಣ್ಣಿರೆರಚಿದೆ. ಎಲ್ಲಾ ಸಂಭ್ರಮಾಚರಣೆಗಳಿಗೂ ಬ್ರೇಕ್ ಹಾಕಿದೆ. ಆದರೂ ಕೆಲ ನವಜೋಡಿಗಳು ಕೋವಿಡ್ ನಡುವೆಯೂ ವಿಶಿಷ್ಟ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕೊರೊನಾ ಆತಂಕದ ನಡುವೆಯೂ ವೈವಾಹಿಕ ಜೀವನಕ್ಕೆ ಕಾಲಿಟ್ಟ ನವಜೋಡಿಯೊಂದು ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟೆನ್ಸ್ ಪಾಲನೆ ಮಾಡಿ ಕೋಲುಗಳನ್ನು ಬಳಸಿ ಹಾರ ಬದಲಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಘಟನೆ ಬಿಹಾರದ ಅನುಮಂಡರ್ ಕ್ಷೇತ್ರದ ತೆಘ್ರಾದಲ್ಲಿ ನಡೆದಿದೆ.

ಕೃತೇಶ್ ಕುಮಾರ್ ಹಾಗೂ ಜ್ಯೋತಿ ಕುಮಾರಿ ಎಂಬ ಜೋಡಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ವಿಶೇಷ ರೀತಿಯಲ್ಲಿ ವಿವಾಹವಾಗಿದ್ದು, ಇವರ ಮದುವೆ ಫೋಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...