alex Certify ಕೊರೊನಾ ಇದೆ ಎಂದು ಮನೆಯಿಂದ ಓಡಿ ಹೋಗಿದ್ದ ಪತಿ ಸಿಕ್ಕಿದ್ದು ಅವಳ ಜೊತೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಇದೆ ಎಂದು ಮನೆಯಿಂದ ಓಡಿ ಹೋಗಿದ್ದ ಪತಿ ಸಿಕ್ಕಿದ್ದು ಅವಳ ಜೊತೆ…!

ಪತ್ನಿಗೆ ಕೊರೊನಾ ಇದೆ ಎಂದು ಸುಳ್ಳು ಹೇಳಿ ಪ್ರೇಮಿ ಜೊತೆ ವಾಸ ಶುರು ಮಾಡಿದ್ದ ಪತಿಯನ್ನು ಇಂಧೋರ್ ನಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದಿದ್ದ ಪತಿ ನಂತ್ರ ಫೋನ್ ರಿಸೀವ್ ಮಾಡಿರಲಿಲ್ಲ. ಪತ್ನಿ ದೂರಿನ ಮೇಲೆ ಕಾರ್ಯಾಚರಣೆ ಶುರು ಮಾಡಿದ ಪೊಲೀಸರು ಪತಿಯನ್ನು ಪತ್ತೆ ಮಾಡಿದ್ದಾರೆ.

ಜುಲೈ 24ರಂದು 28 ವರ್ಷದ ವ್ಯಕ್ತಿ, ಪತ್ನಿಗೆ ಕರೆ ಮಾಡಿ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ. ನಂತ್ರ ಸುಳ್ಳು ಕೊಲೆ ಕಥೆ ಹೇಳುವ ಪ್ರಯತ್ನ ಮಾಡಿದ್ದಾನೆ. ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿ ಹೆಲ್ಮೆಟ್, ಕಚೇರಿ ಬ್ಯಾಗ್ ಬಿಟ್ಟು ಹೋಗಿದ್ದಾನೆ. ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಹಳೆ ಸಿಮ್ ಎಸೆದು ಹೊಸ ಸಿಮ್ ಬಳಸ್ತಿದ್ದವನ ಲೊಕೇಷನ್ ಪತ್ತೆ ಮಾಡಿದ ಪೊಲೀಸರು ಇಂಧೋರ್ ಗೆ ತೆರಳಿದ್ದಾರೆ. ಅಲ್ಲಿ ವ್ಯಕ್ತಿ ಪ್ರೇಮಿ ಜೊತೆ ಸಿಕ್ಕಿಬಿದ್ದಿದ್ದಾನೆ. ಹೆಸರು ಬದಲಿಸಿಕೊಂಡು ತನ್ನ ಪ್ರೇಮಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...